ನೀವು “ಆ” ಪದ ಬಳಸಿಲ್ಲವೇ???
ನಿಮಗೆ ನೈತಿಕತೆ ಇದ್ರೇ ಧರ್ಮಸ್ಥಳಕ್ಕೆ ಬನ್ನಿ
“ಆಣೆ ಪ್ರಮಾಣ” ಮಾಡಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಿ.ಟಿ. ರವಿಗೆ ಸವಾಲ್…!!!??
ಆ ಪದವನ್ನ ಬಳಸೇ ಇಲ್ಲ ಎಂದು ಸಿ.ಟಿ. ರವಿ ಅವರು ಜನರ ಕಣ್ಣಿಗೆ ಮಣ್ಣೇರಚಿ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಧರ್ಮಕ್ಕೆ ಇನ್ನೊಂದು ಹೆಸರೇ ಧರ್ಮಸ್ಥಳ. ನಿಮಗೆ ನೈತಿಕತೆ ಇದ್ರೇ ನೀವು ಸಹಕುಟುಂಬ ಬಂದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ಮೇಲೆ ಆಣೆ ಪ್ರಮಾಣ ಮಾಡಿ,ನಾನು ಕೂಡ ನನ್ನ ಕುಟುಂಬದೊಂದಿಗೆ ಬರುತ್ತೆನೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಸವಾಲು ಅಲ್ಲ ನಾನು ಅವರಿಂದ ಜವಾಬೂ ಬಯಸಲ್ಲ; ದುರ್ಬುದ್ಧಿ ಇದ್ದಂತ ಮನುಷ್ಯನಿಂದ ನಾನು ಜವಾಬು ಬಯಸಲ್ಲ . ಆದ್ರೆ ಜನರ ಕಣ್ಣಿಗೆ ಮಣ್ಣೇರಚಿ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಅವರ ಕಾರ್ಯಕರ್ತರಿಗೆ ನಾಯಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ನೀವು ದೇವರನ್ನು ಬಹಳಷ್ಟು ನಂಬಿದೀರಾ ಧರ್ಮಸ್ಥಳ ನಿಮ್ಮ ಊರಿಗೆ ಸಾಕಷ್ಟು ಹತ್ತಿರ ಇದೆ . ಇಡೀ ದೇಶದ ಜನ ಧರ್ಮಕ್ಕೆ ಇನ್ನೊಂದು ಹೆಸರು ಧರ್ಮಸ್ಥಳ ಅಂತಾರೆ.ಮಂಜುನಾಥ ದೇವರ ಮೇಲೆ ನೀವು ಪ್ರಮಾಣ ಮಾಡಿ ನಿಮಗೆ ನೈತಿಕತೆ ಇದ್ರೆ ನೀವು ಬನ್ನಿ ಅಂತಾ ಕರೆ ಕೊಡ್ತೀನಿ. ಶ್ರೀಗುರು ದತ್ತಾತ್ರೈಯರ ಪರಮಭಕ್ತರಾದ ನೀವು ಅವರ ಮಾಲೆಯನ್ನು ಕೂಡ ಹಾಕಿದ್ದೀರಿ. ಒಂದು ವೇಳೆ ನೀವು ಆ ಪದವನ್ನು ಬಳಸಿಲ್ಲವೆಂದರೇ ಬನ್ನಿ ಧರ್ಮಸ್ಥಳದ ಶ್ರೀ ಮಂಜುನಾಥನ ಎದುರಿಗೆ ಆಣೆ ಪ್ರಮಾಣ ಮಾಡಿ ಎಂದು ಹೇಳಿದರು.
Laxmi News 24×7