ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಮತ್ತು ಗೋವಾ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರ ಪ್ರೀತಿಗೆ ಪಾತ್ರವಾದ ಹೈಟೆಕ್ ಮೋಟರ್ಸ್ ಮತ್ತು ಆಟೋ ಮೊಬೈಲ್ ಪ್ರೈವೇಟ್ ಲಿಮಿಟೆಡನ ಸೇವೆಗೆ ಮೆಚ್ಚಿ ಪಾಲಿಸಿ ಬಝಾರ್ ಹೈಟೆಕ ಮೋಟರ್ಸನೊಂದಿಗೆ ಒಪ್ಪಂದ ಮಾಡಿಕೊಂಡು ಅಶ್ಯೂರ್ಡ್ ಡಿಲಿವರಿ ಪ್ರೋಗ್ರಾಮನಡಿ ಗ್ರಾಹಕರಿಗೆ ಇನ್ನಷ್ಟು ಒಳ್ಳೆಯ ಸೇವೆಯನ್ನು ನೀಡಲೂ ಪ್ರೋತ್ಸಾಹಿಸಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಮತ್ತು ಗೋವಾ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರ ಪ್ರೀತಿಗೆ ಪಾತ್ರವಾದ ಹೈಟೆಕ್ ಮೋಟರ್ಸ್ ಮತ್ತು ಆಟೋ ಮೊಬೈಲ್ ಪ್ರೈವೇಟ್ ಲಿಮಿಟೆಡನ ಸೇವೆಗೆ ಮೆಚ್ಚಿ ಪಾಲಿಸಿ ಬಝಾರ್ ಇದರೊಂದಿಗೆ ಕೈಜೋಡಿಸಿದೆ. ಗ್ರಾಹಕರಿಗೆ ಇನ್ನಷ್ಟು ಒಳ್ಳೆಯ ಸೇವೆಯನ್ನು ನೀಡಲು ಅಶ್ಯೂರ್ಡ್ ಡಿಲಿವರಿ ಪ್ರೋಗ್ರಾಮನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು.
2016 ರಲ್ಲಿ ಟಿ.ವಿ.ಎಸ್ ಮತ್ತು ಅಶೋಕ ಲೆಲ್ಯಾಂಡ್ ಕಮರ್ಷಿಯಲ್ ವ್ಹೆಹಿಕಲ್ಸ, ಪಿಯಾಜಿಯೋ ವೆಹಿಕಲ್ಸ್ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಜನರಿಗೆ ಪರಿಚಿಯಿಸಿತು. ಅದೇ ರೀತಿ 2021 ರಲ್ಲಿ ಹೈಟೆಕ್ ಮಲ್ಟಿ ಬ್ರ್ಯಾಂಡ್ ಕಾರ ಸರ್ವೀಸ್ ವರ್ಕಶಾಪ್ ಸೇವೆಯನ್ನು ಹಲಗಾ ರಾಷ್ಟ್ರೀಯ ಹೆದ್ದಾರಿಯ ಬಳಿ ಕೂಡ ಆರಂಭಗೊಂಡಿತು. ಬಾಶ್ ಜೆನ್ಯೂನ್ ಸ್ಫೆರ್ಸ್ ಉಪಯೋಗಿಸುವ ಪ್ರಾವಿಣ್ಯತೆಯುಳ್ಳವರು ಇಲ್ಲಿ ತಮ್ಮ ಸೇವೆಗೆ ಅಣಿಯಾಗಿದ್ದಾರೆ. ಡಿಲರ್ಸಶಿಪಗಿಂತಲೂ ಶೇ. 30 ರಷ್ಟು ಕಡಿಮೆ ದರವನ್ನು ಇಲ್ಲಿ ಆಕರಿಸಲಾಗುತ್ತದೆ. 4.5 ಗೂಗಲ್ ರೇಟಿಂಗ್ ಕೂಡ ದೊರೆತಿದ್ದು, ಇದು ಗ್ರಾಹಕರ ಸಂತೃಪ್ತಿಯನ್ನು ಸೂಚಿಸುತ್ತದೆ.
ಹೊಸ ವರ್ಷ ಮತ್ತು ಕ್ರಿಸಮಸ್ ಹಿನ್ನೆಲೆ ಫ್ರೀ ವಾಶ್ ಸೇವೆಯನ್ನು ನೀಡಲಾಗುತ್ತಿದೆ. ಗ್ರಾಹಕರ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿ ಒಳ್ಳೆಯ ರೇಟಿಂಗ್ ಪಡೆದ ಹಿನ್ನೆಲೆ ಪಾಲಿಸಿ ಬಝಾರ್ ತನ್ನ 99ನೇ ಕಾರ್ಯಾಗಾರದ ಒಪ್ಪಂದವನ್ನು ಮಾಡಿಕೊಂಡಿದೆ. ಅಶ್ಯೂರ್ಡ್ ಡಿಲಿವರಿ ಪ್ರೋಗ್ರಾಮ್ ಎಂಬ ಹೊಸ ಯೋಜನೆಗೆ ಬೆಳಗಾವಿಯ ಹೈಟೆಕ್ ಕಾರ್ಸನ್ನು ಆಯ್ಕೆ ಮಾಡಿರುವುದು ಹಮ್ಮೆಯ ವಿಷಯ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೈಟೆಕ್ ಮೋಟರ್ಸ್ ಮತ್ತು ಆಟೋ ಮೊಬೈಲ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್ ರಾಜೇಂದ್ರ ದೇಸಾಯಿಯವರು ಕರೆ ನೀಡಿದರು.