Breaking News

ಇ-ಖಾತೆ ಮಾಡಿಕೊಡಲು‌ 5 ಸಾವಿರ ರೂ‌ಪಾಯಿ ಲಂಚ ಪಡೆಯುವಾಗ ಪಿಡಿಒ ಲೋಕಾಯುಕ್ತ ಬಲೆಗೆ

Spread the love

ಶಿವಮೊಗ್ಗ: ಇ-ಖಾತೆ ಮಾಡಿಕೊಡಲು‌ 5 ಸಾವಿರ ರೂ‌ಪಾಯಿ ಲಂಚ ಪಡೆಯುವಾಗ ಸೊರಬ ತಾಲೂಕು ಇಂಡುವಳ್ಳಿಯ ಪ್ರಭಾರ ಪಿಡಿಒ ಈಶ್ವರಪ್ಪ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹಮ್ಮದ್ ಗೌಸ್ ಎಂಬುವರು ಇಂಡುವಳ್ಳಿಯಲ್ಲಿ ಜಮೀನು ಹೊಂದಿದ್ದು, ಇದರಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿದ್ದಾರೆ. ಈ ಮನೆಯ ಮೇಲೆ ಬ್ಯಾಂಕ್​ನಲ್ಲಿ ಸಾಲ ಪಡೆಯಲು ಇ-ಖಾತೆ ಬೇಕಾಗಿರುವುದರಿಂದ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪ್ರಭಾರ ಪಿಡಿಒ ಅವರು ಮಹಮ್ಮದ್ ಗೌಸ್ ಅವರ ಮನೆ ಬಳಿ ಬಂದು ಅಳತೆ ಮಾಡಿಕೊಂಡಿದ್ದರು. ಇದಾದ ನಂತರ ಹಲವು ಬಾರಿ ಪ್ರಭಾರಿ ಪಿಡಿಒ ಈಶ್ವರಪ್ಪ ಅವರ ಬಳಿ ಬಂದು ಕೇಳಿದಾಗ ಅವರು ಇ-ಖಾತೆ ನೀಡದೆ ಸತಾಯಿಸಿದ್ದರು. ಈ ಕುರಿತು ಮೊನ್ನೆ ಪಿಡಿಒ ಈಶ್ವರಪ್ಪ ಅವರ ಬಳಿ ಬಂದಾಗ ಅವರು 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಅಂದು ಲಂಚ ನೀಡದ ಗೌಸ್, ಲೋಕಾಯುಕ್ತ ಅಧಿಕಾರಿಗಳ ಬಳಿ ತೆರಳಿ ದೂರು ನೀಡಿದ್ದರು.

ಇಂದು ಸೊರಬ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಪ್ರಭಾರ ಪಿಡಿಒ ಈಶ್ವರಪ್ಪ ಗೌಸ್​ ಕಡೆಯಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಕುರಿತು ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಹೆಚ್. ಎಸ್. ಸುರೇಶ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ