Breaking News

ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ 50ನೇ ವರ್ಷದ ಕೇಕ್​ ಶೋ ನಡೆಯುತ್ತಿದೆ. ರತನ್​ ಟಾಟಾ, ಎಸ್.ಎಂ.ಕೃಷ್ಣ ಅವರ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿವೆ.

Spread the love

ಬೆಂಗಳೂರು: ನಗರದ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಐತಿಹಾಸಿಕ 50ನೇ ವರ್ಷದ ಕೇಕ್ ಶೋ ಈ ಬಾರಿಯ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪುಟಾಣಿಗಳು, ವಯಸ್ಕರನ್ನು ಮತ್ತು ಹಿರಿಯರನ್ನು ಕೇಕ್ ಶೋ ಆಕರ್ಷಿಸಿದೆ. ಪ್ರಮುಖವಾಗಿ, ದಿವಂಗತ ರತನ್ ಟಾಟಾ ಮತ್ತು ಎಸ್.ಎಂ.ಕೃಷ್ಣ ಅವರನ್ನು ಹೋಲುವ ಕೇಕ್​ಗಳ ಮುಂದೆ ಜನರು ಸೆಲ್ಫಿ ತೆಗೆಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಯಶಸ್ವಿ ಉದ್ಯಮಿಯಾಗಿ ಮಾನವೀಯತೆಯ ಪ್ರತಿರೂಪವಾಗಿ ಬದುಕಿದ ರತನ್ ಟಾಟಾ ಅವರ ಕಲಾಕೃತಿಯನ್ನು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ಸಂಸ್ಥೆ ಪ್ರದರ್ಶನಕ್ಕಿಟ್ಟಿದೆ. ಈ ಕೇಕ್ 250 ಕಿಲೋ ಗ್ರಾಂ ತೂಕವಿದೆ. ಶಾಂತನು, ಮಹೇಶ್ ಮತ್ತು ರಾಹುಲ್ ಅವರ ತಂಡ 10 ದಿನಗಳಷ್ಟು ಸಮಯ ತೆಗೆದುಕೊಂಡು ಈ ಕಲಾಕೃತಿಯನ್ನು ರಚಿಸಿದ್ದಾರೆ. ಮುಖದ ವೈಶಿಷ್ಟ್ಯತೆ, ಅಭಿವ್ಯಕ್ತಿ ಮತ್ತು ನೋಟವನ್ನು ಕೇಕ್ ಮೂಲಕ ತೋರ್ಪಡಿಸಲಾಗಿದೆ. ಅವರ ವ್ಯಕ್ತಿತ್ವದ ನಿಖರ ಚಿತ್ರಣವನ್ನು ನೀಡುವ ಕೇಕ್ ಇದಾಗಿದೆ. ಎಸ್.ಎಂ.ಕೃಷ್ಣ ಮೇಜಿನ ಬಳಿ ಕುಳಿತಿರುವುದನ್ನು ಕೇಕ್ ಮೂಲಕ ಪ್ರಸ್ತುತಪಡಿಸಲಾಗಿದೆ. ಸುತ್ತಲೂ ಫೈಲ್‌ಗಳು, ಪರಿಕರಗಳು ಮತ್ತು ಭಾರತೀಯ ಧ್ವಜದ ಕೇಕ್ ಅನ್ನು ಡೆಸ್ಕ್ ಮೇಲಿಡಲಾಗಿದೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ