ಬೆಳಗಾವಿ: “ಅಂದು ಮಹಾತ್ಮ ಗಾಂಧಿ, ಇಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಈಗ ಹೊಸ ಯುಗದಲಲ್ಲಿ ಹೇಗೆ ಪಕ್ಷ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ದೇಶದ ಎಲ್ಲ ನಾಯಕರು ಬೆಳಗಾವಿಗೆ ಬಂದು ಚರ್ಚಿಸಲಿದ್ದಾರೆ. ಹೊಸ ಅಧ್ಯಾಯ ಬೆಳಗಾವಿಯಿಂದಲೇ ಪ್ರಾರಂಭವಾಗಲಿದೆ” ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಕಾಂಗ್ರೆಸ್ ಅಧಿವೇಶನ ದೇಶದ ಒಂದು ಇತಿಹಾಸ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಮತ್ತು ಇದು ದೇಶಕ್ಕೆ ದೊಡ್ಡ ಶಕ್ತಿ. ಅವತ್ತು ಜವಾಹರಲಾಲ್ ನೆಹರು, ಗಂಗಾಧರ್ ರಾವ್ ದೇಶಪಾಂಡೆ ಇಬ್ಬರು ಜನರಲ್ ಸೆಕ್ರೆಟರಿಗಳಿದ್ದರು. ಇವರಿಬ್ಬರು ಗಾಂಧೀಜಿಯವರನ್ನು ಕರೆದುಕೊಂಡು ಬಂದು ಅಧ್ಯಕ್ಷರಾಗಿ ಮಾಡಿ ಕಾಂಗ್ರೆಸ್ ಅಧಿವೇಶನ ನಡೆಸಿದ್ದರು’ ಎಂದು ತಿಳಿಸಿದರು.