Breaking News

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಈಫಾ ಹೋಟೆಲ್ ನಲ್ಲಿ ಆಶೀರ್ವಾದ್ ಇಂಡಸ್ಟ್ರೀಸ್ ವತಿಯಿಂದ ಚನ್ನಮ್ಮನ ಕಿತ್ತೂರಿನಲ್ಲಿ ಆರಂಭಿಸಿರುವ ಬೆಲ್ ಮಿಕ್ಸ್ ಫುಡ್ ಪ್ರಾಡಕ್ಟ್ಸ್ ನ್ನು ಬಿಡುಗಡೆಗೊಳಿಸಿ, ಉದ್ಯಮಕ್ಕೆ ಶುಭ ಹಾರೈಸಿದೆ.

Spread the love

ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಈಫಾ ಹೋಟೆಲ್ ನಲ್ಲಿ ಆಶೀರ್ವಾದ್ ಇಂಡಸ್ಟ್ರೀಸ್ ವತಿಯಿಂದ ಚನ್ನಮ್ಮನ ಕಿತ್ತೂರಿನಲ್ಲಿ ಆರಂಭಿಸಿರುವ ಬೆಲ್ ಮಿಕ್ಸ್ ಫುಡ್ ಪ್ರಾಡಕ್ಟ್ಸ್ ನ್ನು ಬಿಡುಗಡೆಗೊಳಿಸಿ, ಉದ್ಯಮಕ್ಕೆ ಶುಭ ಹಾರೈಸಿದೆ.

ಯುವಕರು ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯೋಗ ಸ್ಥಾಪಿಸಿ ಹತ್ತಾರು ಯುವಕರಿಗೆ ಉದ್ಯೋಗ ನೀಡುವಂತಾಗಬೇಕು. ಇಂದು ಅನೇಕರು ಕಷ್ಟಪಟ್ಟು ಓದಿ ಶಿಕ್ಷಣ ಪಡೆದು, ಕೆಲಸ ಹುಡುಕುತ್ತಾ ಕುಳಿತುಕೊಳ್ಳುತ್ತಾರೆ. ಇಂಜಿನಿಯರಿಂಗ್ ಪದವೀಧರರಾದ ನವೀನ್ ಮೆಳವೆಂಕಿ, ಸುಮನ್ ಮೋದಿ ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯಮ ಆರಂಭಿಸಿ ಹತ್ತಾರು ಯುವಕರಿಗೆ ಉದ್ಯೋಗ ನೀಡುತ್ತಿರುವುದು ಶ್ಲಾಘನೀಯ.

ಖ್ಯಾತ ಸಾರಿಗೆ ಉದ್ಯಮಿಯಾದ ವಿಜಯ‌ ಸಂಕೇಶ್ವರ್ ಅವರು ಖಾಲಿ ಕೈಯಲ್ಲಿ ಮನೆಯಿಂದ ಬಂದು ಇಂದು ರಾಷ್ಟ್ರದ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ.‌ ಸಾರಿಗೆ, ಪತ್ರಿಕೋದ್ಯಮ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆ ಮಾಡಿದ್ದಾರೆ , ಅಂತಹ ವ್ಯಕ್ತಿಗಳು ಸಮಾಜಕ್ಕೆ ಆದರ್ಶವಾಗಿದ್ದಾರೆ. ಈಗ ಆರಂಭಿಸಿರುವ ಉದ್ಯಮ ಯಶಸ್ವಿಯಾಗಲಿ, ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿ ಎಂದು ಹಾರೈಸುತ್ತೇನೆ.

ಈ ವೇಳೆ ಯುವ ಉದ್ಯಮಿಗಳಾದ ನವೀನ್ ಮೆಳವಂಕಿ, ಸುಮನ್ ಮೋದಿ, ಶಾಸಕ ಬಾಬಾಸಾಹೇಬ್ ಪಾಟೀಲ್, ಡಾ.ಗುರುದೇವಿ ಹುಲೆಪ್ಪನವರಮಠ್, ಜ್ಯೋತಿ ಭಾವಿಕಟ್ಟಿ, ಮಹೇಶ್ ಬರು, ದಿಗ್ವಿಜಯ್ ಎಸ್ ಸಿದ್ನಾಳ್, ಭಾರದ್ವಾಜ್ ಕಾರಂತ ಸೇರಿದಂತೆ ಹಲವರು ಮಂದಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದಲ್ಲಿ ಶಿಸ್ತುಕ್ರಮ :ಈಶ್ವರ ಖಂಡ್ರೆ

Spread the loveಚಾಮರಾಜನಗರ: ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವು ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ