ಕಬ್ಬಿನ ಬಿಲ್ ಪಾವತಿಸಿ; ರೈತರಿಗೆ ಒಂದು ಕಾನೂನು, ಕಾರ್ಖಾನೆಗಳಿಗೆ ಇನ್ನೊಂದು ಕಾನೂನು ಯಾಕೆ..? ರೈತ ಮುಖಂಡರ ಪ್ರಶ್ನೆ.!
ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಪ್ರಾರಂಭಗೊAಡು, 1 ತಿಂಗಳು ಕಳೆದರೂ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಪಾವತಿಸಿಲ್ಲ.
ಇನ್ನೂ ಕೆಲ ಕಾರ್ಖಾನೆಗಳು ದರವನ್ನೇ ಘೋಷಿಸಿಲ್ಲ. ಸರ್ಕಾರ, ರೈತರು ಹೋರಾಟ ಮಾಡಿದರೇ ಕಾನೂನು ಕ್ರಮ ಕೈಗೊಳ್ಳುವ ಅಂಜಿಕೆ ಹಾಕುತ್ತದೆ. ಆದರೇ ಕಬ್ಬು ಪೂರೈಸಿದ 15 ದಿನಗಳ ಒಳಗೆ ಬಿಲ್ ಪಾವತಿಸಬೇಕಾದ ಕಾರ್ಖಾನೆಗಳು, ಕಾನೂನು ಪಾಲನೆ ಮಾಡುತ್ತಿಲ್ಲ,
ಅವರ ಮೇಲೆ ಕಾನೂನು ಕ್ರಮ ಇಲ್ಲವೇ ಎಂದು ರೈತ ಮುಖಂಡ ಸುರೇಶ ಚೌಗುಲೆ ಪ್ರಶ್ನಿಸಿದ್ದಾರೆ.