ಗಾಂಜಾ ಮತ್ತು ಅಕ್ರಮ ಮದ್ಯ ಮಾರಾಟ ಹಾವಳಿ: ಎಸ್ಪಿಯವರಿಗೆ ಮನವಿ ಸಲ್ಲಿಸಿದ ಬಿಜೆಪಿ
ಭಾರತೀಯ ಜನತಾ ಪಾರ್ಟಿ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಸ್ಟ ವತಿಯಿಂದ ವಿಜಯಪುರ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಾಂಜಾ ಮತ್ತು ಮದ್ಯ ಮಾರಾಟದ ಹಾವಳಿ ತಡೆಗಟ್ಟಲು ಕ್ರಮ ವಹಿಸಿ ಎಂದು ಮನವಿ ಸಲ್ಲಿಸಿದರು.
ಸಮಾಜಕ್ಕೆ ಮಾರಕವಾದ ಅಕ್ರಮ ಗಾಂಜಾ ಮತ್ತು ಮಧ್ಯ ಮಾರಾಟ ಹಾವಳಿಯನ್ನು ತಡೆಗಟ್ಟಲು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ವಾಣಿಜ್ಯ ವ್ಯಾಪಾರ ಪ್ರಕೋಷ್ಟಕ ಸಂಚಾಲಕ ವಿಜಯಕುಮಾರ್ ಕುಡಿಗನೂರ, ವಿಜಯಪುರ್ ನಗರ ಮಂಡಲ ಅಧ್ಯಕ್ಷರಾದ ಶಂಕರ್ ಹೂಗಾರ್, ವಿಜಯಪುರ ಜಿಲ್ಲಾ ಪ್ರಖೋಸ್ಟ್ ಸಂಚಾಲಕರಾದ ಭರತ್ ಕುಲಕರ್ಣಿ, ಡಾ. ಅರವಿಂದ ಲಮಾಣಿ, ಭಾರತಿ ಭುಯ್ಯಾರ, ಪ್ರದೀಪ್ ಚಲವಾದಿ ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.