ವಿಜಯಪುರ ನಗರದಲ್ಲಿ ಅತಿಕ್ರಮಣ ತೆರವು ಕಾರ್ಯಚರಣೆ
ನಿನ್ನಯ ದಿನ ವಿಜಯಪುರ ನಗರದ ಹ್ರದಯ ಭಾಗವಾದ ನೆಹರು ಮಾರುಕಟ್ಟೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ .
ಇಂದು ಜುಮ್ಮಾ ಮಸೀದಿಯಿಂದ ಶೆಡಜಿ ಮಲ್ಲೆ ತೋಟದ ವರೆಗೆ ಕುಂಬಾರ ಗಲ್ಲಿಯ ಮೂಲಕ ದಿವಟಗೇರಿ ಕ್ರಾಸ್ ವರೆಗೆ ಇದ್ದ ಅತಿಕ್ರಮಣ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು..
ವಿಜಯಪುರ ನಗರದ ನೆಹರೂ ಮಾರುಕಟ್ಟೆಯಲ್ಲಿ ನಡೆದ ತೆರವು ಕಾರ್ಯಾಚರಣೆ ನಂತರ ಈಗ ಮಹಾನಗರ ಪಾಲಿಕೆಯ ಬುಲ್ಡೋಜರ್ ಜುಮ್ಮಾ ಮಸೀದಿ ರೋಡ್ ನಿಂದ ಶೆಡಜಿ ಮಲ್ಲೆ ತೊಟದ ವರೆಗೆ ಇವತ್ತು ಕಾರ್ಯಾಚರಣೆ ನಡೆದಿದ್ದು.. ಅಲ್ಲಿ ಇದ್ದ ಹಲವು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಯಿತು..
ಇನ್ನು ಕುಂಬಾರ ಗಲ್ಲಿಯ ಮುಖ್ಯ ರಸ್ತೆಯಿಂದ ದಿವಟಗೇರಿ ಗಲ್ಕಿಯ ಕ್ರಾಸ್ ವರೆಗೂ ಕಾರ್ಯಾಚರಣೆ ನಡೆದಿದ್ದು ಅನಧಿಕೃತ ಕಟ್ಟಡಗಳಿಗೆ ಈಗಾಗಲೇ ಮಾರ್ಕ ಮಾಡಿ ಮಹಾನಗರ ಪಾಲಿಕೆಯಿಂದ ನೋಟಿಸ್ ನಿಡಲಾಗಿದ್ದು..ನಿನ್ನೆಯ ದಿನ ಮಹಾನಗರ ಪಾಲಿಕೆಯ ಮಹಾಪೌರರು ಮತ್ತು ವಾರ್ಡ ಸದಸ್ಯರು ಸಾರ್ವಜನಿಕರಿಗೆ ತಿಳುವಳಿಕೆ ಹೇಳಿದ ನಂತರ ಅತಿಕ್ರಮಣ ಕಟ್ಟಡಗಳನ್ನು ತೆರವು ಮಾಡುತ್ತಾ ಇದ್ದು ತೆರವು ಕಾರ್ಯಾಚರಣೆ ವೇಳೆ ಹಲವು ಜನರು ಸ್ವಯಂ ಪ್ರೇರಿತರಾಗಿ ತಮ್ಮ ಮುಂಗಟ್ಟುಗಳನ್ನು ಖಾಲಿ ಮಾಡಿದರು ..ಖಾಲಿ ಮಾಡದೇ ಇರುವ ಕಟ್ಟಡಗಳನ್ನು ತೆರವು ಮಾಡುವದು ನಡೆದಿದೆ..
ಇನ್ನು ಸಾರ್ವಜನಿಕರು ತಮ್ಮ ಮನೆ ಕಟ್ಟುವ ಮುನ್ನ ಮಹಾನಗರ ಪಾಲಿಕೆಯಿಂದ ಸರಿಯಾದ ರೀತಿಯಲ್ಲಿ ಸರ್ವೆ ಮಾಡಿ ಮನೆ ಕಟ್ಟುವದು ಸೂಕ್ತ ಮತ್ತು ಇಂತಹ ತೆರವು ಕಾರ್ಯಾಚರಣೆಯಿಂದ ತಮ್ಮ ಮನೆಯನ್ನು ರಕ್ಷಿಸಬಹುದು ಎಂದು ಹೇಳಿದರು..
ಕಾರ್ಯಚರಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.