ಮಹಾಮೇಳಾವಾ ನಡೆಸುವುದಾಗಿ ಎಂ. ಇ. ಎಸ್ ಡಿಸಿಗೆ ಮನವಿ
ನಿಜವಾಗಿಯೂ ಕರ್ನಾಟಕ ಸರಕಾರಕ್ಕೆ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಕಾಳಜಿ ಇದ್ದರೇ 1956 ರಿಂದ ಯಾಕೆ ಅಧಿವೇಶನ ನಡೆಸಲಿಲ್ಲ? – ಮಾಜಿ ಶಾಸಕ ಕಿಣೇಕರ್
ಮಹಾಮೇಳಾವಾ ನಡೆಸುವುದಾಗಿ ಎಂ. ಇ. ಎಸ್ ಡಿಸಿಗೆ ಮನವಿ
ನಿಜವಾಗಿಯೂ ಕರ್ನಾಟಕ ಸರಕಾರಕ್ಕೆ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಕಾಳಜಿ ಇದ್ದರೇ
1956 ರಿಂದ ಯಾಕೆ ಅಧಿವೇಶನ ನಡೆಸಲಿಲ್ಲ?
ಮಾಜಿ ಶಾಸಕ ಕಿಣೇಕರ್ ಪ್ರಶ್ನೆ
ಡಿಸೆಂಬರ್ 9 ರಿಂದ ನಡೆಯುವ ಕರ್ನಾಟಕ ಸರ್ಕಾರದ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಮಹಾಮೇಳಾವಾ ಆಯೋಜಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯು ಮನವಿ ಮಾಡಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಯೋಗದ ಕಾರ್ಯಧ್ಯಕ್ಷ ಮಾಜಿ ಶಾಸಕ ಮನೋಹರ್ ಕಿಣೇಕರ್ ಅವರ ನೇತೃತ್ವದಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿಯನ್ನ ಸಲ್ಲಿಸಲಾಯಿತು.
ಮಾಹಿತಿ ನೀಡಿದ ಮಾಜಿ ಶಾಸಕ ಮನೋಹರ್ ಕಿಣೇಕರ್
2006 ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಮೊದಲ ದಿನ ಮರಾಠಿ ಭಾಷೆಯಿಂದ ಮಹಾಮೇಳಾವಾ ಆಯೋಜಿಸಲಾಗುತ್ತದೆ. ನಿಜವಾಗಿಯೂ ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕಾಳಜಿ ಇದ್ದರೆ 1956 ರಿಂದ ಯಾಕೆ ಅಧಿವೇಶನವನ್ನ ಆಯೋಜಿಸಲಿಲ್ಲ. 2004 ರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಗಡಿ ವಿವಾದವಾಗಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾಗಿನಿಂದ ಅಧಿವೇಶನ ಬೆಳಗಾವಿಯಲ್ಲಿ ಆರಂಭಿಸಲಾಗಿದೆ. ಪರವಾನಗಿ ಸಿಗಲಿ ಬಿಡಲಿ ಮಹಾಮೇಳಾವಾ ನಡೆದೇ ನಡೆಯುತ್ತದೆ ಎಂದರು.
ಮನವಿ ಸಲ್ಲಿಸುವ ವೇಳೆ ಮಾಜಿನಗರ ಸೇವಕ ರಣಜಿತ್ ಚವ್ಹಾಣ ಪಾಟೀಲ್, ಪ್ರಕಾಶ್ ಮರಗಾಳೆ, ಎಂಜಿ ಪಾಟೀಲ್, ರಾಮಚಂದ್ರ ಮೊದಗೇಕರ್, ವಿಕಾಸ್ ಕಲಘಟಗಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
Laxmi News 24×7