ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಸರ್ಕಾರ ರಚನೆ ಕಗ್ಗಂಟು ಬಗೆಹರಿದಂತೆ ಆಗಿದ್ದು ದೇವೇಂದ್ರ ಫಡ್ನವೀಸ್ಗೆ ಸಿಎಂ ಪಟ್ಟ ಕಟ್ಟಲು ನಿರ್ಧಾರ ಆಗಿದೆ ಎನ್ನಲಾಗಿದೆ.
ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಿರುವ ಏಕನಾಥ್ ಶಿಂಧೆ ಹಾಗೂ ಎನ್ಸಿಪಿ ಅಜಿತ್ ಪವಾರ್ ಬಣ ಪ್ರಬಲ ಖಾತೆಗಳಿಗೆ ಡಿಮ್ಯಾಂಡ್ ಇಟ್ಟಿದ್ದು, ಇವತ್ತು ದೆಹಲಿಯಲ್ಲಿ ನಡೆಯಲಿರುವ ಮಹಾಯುತಿ ಸಭೆಯಲ್ಲಿ ಎಲ್ಲವೂ ಫೈನಲ್ ಆಗಲಿದೆ.
ಬಿಜೆಪಿಯ ದೇವೇಂದ್ರ ಫಡ್ನವಿಸ್ಗೆ ಸಿಎಂ ಪಟ್ಟ ಬಹುತೇಕ ಫಿಕ್ಸ್?
ಮಹಾರಾಷ್ಟ್ರ ಸಿಎಂ ಯಾರು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಲಿದೆ. ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆಯುತ್ತ ಬಂದರೂ ಮಹಾಯುತಿಯಲ್ಲಿ ಸಿಎಂ ಯಾರು ಎಂಬುದು ಸ್ಪಷ್ಟವಾಗಿರಲಿಲ್ಲ. ಕೊನೆಗೂ ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಸರ್ಕಾರ ರಚನೆ ಕಗ್ಗಂಟು ಬಗೆಹರಿದಂತೆ ಆಗಿದೆ. ಏಕನಾಥ್ ಶಿಂಧೆ ಸಿಎಂ ಪದವಿ ತ್ಯಾಗ ಮಾಡುವ ಸುಳಿವು ನೀಡಿದ ಬೆನ್ನಲ್ಲೇ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಪಟ್ಟಕ್ಕೇರುವುದು ಬಹುತೇಕ ಫೈನಲ್ ಆದಂತೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Laxmi News 24×7