ಕಾಗವಾಡದಲ್ಲಿ ಕಿತ್ತೂರು ಕರ್ನಾಟಕ ಸೇನೆ ಶಾಖೆ ಉದ್ಘಾಟನೆ; ನಾಡು, ನುಡಿ, ಗಡಿ ಭಾಗದ ರಕ್ಷಣೆಗೆ ಕಿತ್ತೂರು ಕರ್ನಾಟಕ ಸೇನೆಯಿಂದ ನಿರಂತರ ಹೋರಾಟ: ಮಹಾದೇವ ತಳವಾರ..!
ಕನ್ನಡ ನಾಡು, ನುಡಿ ಜೊತೆಗೆ ಗಡಿನಾಡಿನ ರಕ್ಷಣೆಗೆ ಕಿತ್ತೂರು ಕರ್ನಾಟಕ ಸೇನೆ ನಿರಂತವಾಗಿ ಹೋರಾಟ ಮಾಡಲಿದ್ದು, ಯಾವುದೇ ಕಾರಣಕ್ಕೆ ಕನ್ನಡ ಅಭಿಮಾನದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನಾಡು, ನುಡಿ, ಗಡಿ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಿತ್ತೂರು ಕರ್ನಾಟಕ ಸೇನೆ ಹೋರಾಡಲಿದೆ ಎಂದು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಹೇಳಿದ್ದಾರೆ.
Laxmi News 24×7