ನವೆಂಬರ್ 27: ಆರ್ಟಿಒ ಇನ್ಸ್ಪೆಕ್ಟರ್ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್ಸಿ! ಎಫ್ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನೆಲಮಂಗಲ ಆರ್ಟಿಒದಲ್ಲಿ ಎಟಿಎಸ್ ಸೆಂಟರ್ಗಳನ್ನು ತೆರೆಯಲಾಗಿದೆ. ಈ ಸೆಂಟರ್ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಆರ್ಟಿಓ ಅಧಿಕಾರಿಗಳು, ಬ್ರೋಕರ್ಗಳ ಹಾವಳಿ ಇಲ್ಲದೆ ವಾಹನಗಳ ಎಫ್ಸಿ ಮಾಡಿಸಿಕೊಳ್ಳಬಹುದು.
ಈ ಹಿಂದೆ ವಾಹನಗಳಿಗೆ ಎಫ್ಸಿ ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್ಸಿ ಆಗುತ್ತದೆ!
ನಿಯಮಗಳ ಪ್ರಕಾರ, ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್ಸಿ ಮಾಡಿಸಬೇಕು.
ಎಫ್ಸಿ ಮಾಡುವಾಗ ನಡೆಸುವ ತಪಾಸಣೆಗಳು ಏನೇನು?
- ಇಂಜಿನ್ ಸೌಂಡ್
- ಹೊಗೆ ತಪಾಸಣೆ
- ಸ್ಪೀಡ್ ಗವರ್ನರ್
- ಹೆಡ್ ಲೈಟ್
- ಇಂಡಿಕೇಟರ್
- ವೈಪರ್
- ಹಾರನ್
- ಬ್ರೇಕ್ ಲೈಟ್ಸ್
- ಪೇಟಿಂಗ್
- ಬಾಡಿ ಡೆಟೋರೆಟೆಡ್
- ಟೈರ್ಗಳ ತಪಾಸಣೆ
- ವೆಹಿಕಲ್ ವೈಬ್ರೇಷನ್
- ಇಂಜಿನ್ ಆಯಿಲ್ ಫಿಟ್ನೆಸ್
ಅಕ್ರಮ ತಡೆಗೆ ಎಟಿಎಸ್ ಮಷಿನ್ ಹೇಗೆ ಸಹಕಾರಿ?
ಈ ಹಿಂದೆ ಎಫ್ಸಿಗೆ ಹೋಗುವ ವಾಹನಗಳಲ್ಲಿ ಎಲ್ಲಾ ಸರಿ ಇದ್ದರೂ ಆರ್ಟಿಒ ಇನ್ಸ್ಪೆಕ್ಟರ್ಗಳು ಏನಾದರೂ ಕಾರಣ ಹೇಳಿ ಎಫ್ಸಿ ಫೇಲ್ ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್ಗಳಿಂದ ಆ ರೀತಿ ಮಾಡಲು ಆಗುವುದಿಲ್ಲ. ಪ್ರತಿಯೊಂದನ್ನೂ ಈ ಮಷಿನ್ಗಳು ಪರಿಶೀಲನೆ ಮಾಡಲಿವೆ. ಈ ಮಷಿನ್ ಮೂಲಕ ಸ್ಥಳದಲ್ಲೇ ವಾಹನ ಮಾಲೀಕರಿಗೆ ಎಫ್ಸಿ ಸರ್ಟಿಫಿಕೇಟ್ ದೊರೆಯುತ್ತದೆ. ಈ ಬಗ್ಗೆ ವಾಹನ ಮಾಲೀಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.