ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ಒಂದು ದುರಂತ ಘಟನೆ ನಡೆದಿದೆ. 65 ವರ್ಷದ ಕಸ್ತೂರಿ ರಂಗಪ್ಪ ಅವರು ಪಡಿತರ ಪಡೆಯಲು ಹೋಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿ ಅವರ ಪತ್ನಿ ಜಯಮ್ಮ (58) ಕೂಡ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.
ದಾವಣಗೆರೆ, ನವೆಂಬರ್ 26: ಸಾವಿನಲ್ಲೂ ದಂಪತಿ (Couple) ಒಂದಾಗಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ನಡೆದಿದೆ. ಕಸ್ತೂರಿ ರಂಗಪ್ಪ (65) ಮತ್ತು ಜಯಮ್ಮ (58) ಮೃತ ದಂಪತಿ. ಸದ್ಯ ಸಂಬಂಧಿಕರು ದಂಪತಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಕಸ್ತೂರಿ ರಂಗಪ್ಪ ಹೋಗಿದ್ದಾರೆ. ಈ ವೇಳೆ ಕುಸಿದುಬಿದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನು ಪತಿ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಪತ್ನಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಜಯಮ್ಮ ಕುಸಿದುಬಿದ್ದು ಅವರು ಕೂಡ ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ.