ದೆಹಲಿ: ದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮದುವೆ ಆಮಂತ್ರಣ ನೀಡಿದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್.
ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಇಂದು ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್ ಅವರೊಂದಿಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಶ್ರೀ ಪ್ರದೀಪ್ ಶೆಟ್ಟರ್ ಅವರ ಪುತ್ರಿ ಕುಮಾರಿ ಅಮೋಘ ಅವರ ಮದುವೆ ಆರತಕ್ಷತೆ ಸಮಾರಂಭಕ್ಕೆ ಆಹ್ವಾನಿಸಿದರು.
ಶ್ರೀ ಪ್ರದೀಪ್ ಶೆಟ್ಟರ್ ಅವರ ಪುತ್ರಿ ಕುಮಾರಿ ಅಮೋಘ ಅವರ ಮದುವೆಯು ಶ್ರೀ ಚನ್ನಬಸಪ್ಪ ಜತ್ತಿ ಅವರ ಪುತ್ರ ಶ್ರೀ ಧೃವ ಅವರೊಂದಿಗೆ ನಿಶ್ಚಯವಾಗಿದ್ದು, ಆರತಕ್ಷತೆಯನ್ನು ಡಿಸೆಂಬರ್ 5ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.