Breaking News

ರಾಧಿಕಾ ಜೊತೆ ಮುಂಬೈನಲ್ಲಿ ಯಶ್ ಸುತ್ತಾಟ; ಕಾಲಿಗೆ ಬಿದ್ದ ಅಭಿಮಾನಿ

Spread the love

ಯಶ್ ಅವರು ‘ಕೆಜಿಎಫ್ ಚಾಪ್ಟರ್ 2’ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಮುಂಬೈನಲ್ಲಿದ್ದಾರೆ.

ಹೌದು, ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಮುಂಬೈನ ಸ್ಟುಡಿಯೋಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಯಶ್ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ರಾಧಿಕಾ ಜೊತೆ ಅವರು ಸುತ್ತಾಟ ನಡೆಸುತ್ತಿದ್ದಾರೆ.

ಯಶ್ ಅವರು ಮುಂಬೈನಲ್ಲಿ ರಾಧಿಕಾ ಪಂಡಿತ್ ಹಾಗೂ ಯಥರ್ವ್​, ಆಯ್ರಾ ಜೊತೆ ಸುತ್ತಾಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮುಂಬೈನಲ್ಲಿರೋ ಬಾಲಿವುಡ್ ಪಾಪರಾಜಿಗಳು ಯಶ್ ಅವರು ಸುತ್ತಾಡುತ್ತಿರುವ ವಿಡಿಯೋಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆ.

ಯಶ್ ಅವರಿಗೆ ಕರ್ನಾಟಕ ಮಾತ್ರವಲ್ಲ ಮುಂಬೈನಲ್ಲೂ ಫ್ಯಾನ್ಸ್ ಇದ್ದಾರೆ. ಅವರು ನಡೆದು ಬರುವಾಗ ಓರ್ವ ಅಭಿಮಾನಿ ಕಾಲಿಗೆ ಬಿದ್ದಿದ್ದಾನೆ. ಆದರೆ, ಇದಕ್ಕೆ ಯಶ್ ಅವಕಾಶ ನೀಡಲಿಲ್ಲ. ಅವರು ಕಾಲಿಗೆ ಬೀಳೋದು ಬೇಡ ಎಂದು ಕೈ ಸನ್ನೆ ಮೂಲಕ ತೋರಿಸಿದ್ದಾರೆ. ಪುಟ್ಟ ಮಗುವೊಂದು ಯಶ್ ಎದುರು ನಿಂತಿತ್ತು. ಆಗ ಅವರು ಖುಷಿಯಿಂದ ಪೋಸ್ ಕೊಟ್ಟಿದ್ದಾರೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಈ ಚಿತ್ರದ ಶೂಟಿಂಗ್ ನಡೆದಿತ್ತು. ಆ ಬಳಿಕ ಇಡೀ ತಂಡ ಮುಂಬೈಗೆ ಶಿಫ್ಟ್ ಆಗಿದೆ. ಈ ಕಾರಣದಿಂದಲೇ ಯಶ್ ಅವರು ಕುಟುಂಬದ ಜೊತೆ ಮುಂಬೈನಲ್ಲಿ ಸಮಯ ಕಳೆಯುತ್ತಿದ್ದಾರೆ


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ