Breaking News

ಬೆಂಡೆಬೆಂಬಳಿ ಗ್ರಾಮದಲ್ಲಿ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿ ಸ್ಪರ್ಧೆ ಆಯೋಜನೆ

Spread the love

ಯಾದಗಿರಿಯ ಗ್ರಾಮೀಣ ಕ್ರೀಡೆ: ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ; ಫೋಟೋಸ್​ ನೋಡಿ
ಆಧುನಿಕ ಜಗತ್ತಿನಲ್ಲಿ ಹಳೇ ಸಂಪ್ರದಾಯಗಳು ಮರೆಮಾಚಿ ಹೋಗುತ್ತಿವೆ. ಹಳೇ ಕ್ರೀಡೆಗಳು ಮಾಯವಾಗಿ ಹೊಸ ಜಮಾನ ಶುರುವಾಗಿದೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಜಮಾಲೋದ್ದೀನ್ ದರ್ಗಾದ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡಿನ ಕಲ್ಲು ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಂಗ್ರಣಿ ಕಲ್ಲನ್ನು ಫೈಲ್ವಾನರ ಮೂಲಕ ಎತ್ತುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತೆ. ಆದರೆ, ಈ ಜಾತ್ರೆಯಲ್ಲಿ ಮಾತ್ರ ಭಾರವಾದ ಕಲ್ಲನ್ನಯ ಎತ್ತುಗಳ ಮೂಲಕ ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.ಇದೇ ಕಾರಣಕ್ಕೆ ಯಾದಗಿರಿ ಜಿಲ್ಲೆ ಸೇರಿದಂತೆ ಪಕ್ಕದ ರಾಯಚೂರು, ವಿಜಯಪುರ, ಬಾಗಲಕೋಟ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಎತ್ತುಗಳನ್ನು ಸ್ಪರ್ಧೆಗೆ ಇಳಿಸಲಾಗಿತ್ತು. ಸುಮಾರು ನೂರು ಮೀಟರ್​ನ ಮೈದಾನವನ್ನು ತಯಾರಿ ಮಾಡಲಾಗಿತ್ತು. ಸುಮಾರು ಒಂದುವರೆ ಟನ್ ಕಲ್ಲನ್ನು ತಯಾರು ಮಾಡಲಾಗಿತ್ತು. ಜೋಡಿಎತ್ತು ಮೈದಾನಕ್ಕೆ ಇಳಿಸಲಾಗಿ ಬಳಿಕ ಕಲ್ಲನ್ನು ಕಟ್ಟಲಾಗುತ್ತೆ.

Spread the love

About Laxminews 24x7

Check Also

ಬಿಜೆಪಿ-ಜೆಡಿಎಸನಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು??

Spread the loveಜ್ಯಾತ್ಯಾತೀತವಾಗಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ