ಶಿವಮೊಗ್ಗ, (ನವೆಂಬರ್ 25): ಸಚಿವ ರಹೀಂ ಖಾನ್ ಅವರು ಇಂದು (ನವೆಂಬರ್ 25) ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳು, ಇಂದೀರಾ ಕ್ಯಾಂಟೀನ್ ಊಟ ಎಂದು ಹೇಳಿ ಸಚಿವರಿಗೆ ಹೋಟೆಲ್ ಊಟ ತಿನ್ನಿಸಿ ಯಾಮಾರಿಸಿದ್ದಾರೆ.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಇಂದು ಮಧ್ಯಾಹ್ನ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿಗಳು, ಇಂದಿರಾ ಕ್ಯಾಂಟಿನ್ ಊಟ ಎಂದು ಹೇಳಿ ಹೋಟೆಲ್ನಿಂದ ತಂದಿದ್ದ ಊಟವನ್ನು ನೀಡಿದ್ದಾರೆ.
ಅಧಿಕಾರಿಗಳು ನೀಡಿದ್ದ ಊಟವನ್ನೇ ಸಚಿವರು ಸೇವಿಸಿ ಹೋಗಿದ್ದು, ಇದೀಗ ಅಧಿಕಾರಿಗಳು ನಡೆ ಬಗ್ಗೆ ಚರ್ಚೆ ಶುರುವಾಗಿದೆ.