.ನವದೆಹಲಿ: ಕಳೆದ ಎರಡು ದಿನಗಳಿಂದ ಯುವತಿಯ ಬ್ಯಾಕ್‍ಫ್ಲಿಪ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೀರೆ ಧರಿಸಿ ಮಾಡಿರುವ ಕಸರತ್ತು ಕಂಡ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬ್ಯಾಕ್‍ಫ್ಲಿಪ್ ಮಾಡಿರುವ ಯುವತಿಯ ಹೆಸರು ಮಿಲಿ ಸರ್ಕಾರ. ಈ ಬ್ಯಾಕ್‍ಫ್ಲಿಪ್ ಸೇರಿದಂತೆ ಹಲವು ಕಸರತ್ತಿನ ವೀಡಿಯೋಗಳನ್ನು ಮಿಲಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಮಿಲಿ ಓರ್ವ ಯೋಗಾಪಟು, ಕಟೆಂಪರಿ, ಡ್ಯಾನ್ಸರ್ ಆಗಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಸಹ ಮಿಲಿಯ ಕಸರತ್ತಿಗೆ ಮೆಚ್ಚುಗೆ ಸೂಚಿಸಿ, ನಾನು ನಿಮ್ಮ ಅಭಿಮಾನಿ ಎಂದು ಕೊಂಡಾಡಿದ್ದಾರೆ. ಅದೇ ರೀತಿ ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ. ಸೀರೆಯಲ್ಲಿದ್ದರೂ ವ್ಯಾಯಾಮಕ್ಕೂ ಸಿದ್ಧ ಎಂದು ಮಹಿಳಾ ನೆಟ್ಟಿಗರು ಮಿಲಿಯವರ ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ಗುಲ್ ಪನಾಗ್ ಅವರು ಸೀರೆಯಲ್ಲಿಯೇ ಪುಶ್ ಅಪ್ ಮಾಡಿ ಅಚ್ಚರಿ ಮೂಡಿಸಿದ್ದರು. ಪುಶ್ ಅಪ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಎಂದಾದರೂ, ಎಲ್ಲಾದರೂ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ವೀಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಗುಲ್ ಪಾನಗ್ ಅಭಿಮಾನಿಗಳನ್ನು ಸ್ಫೂರ್ತಿಗೊಳಿಸಿದ್ದು, ಸಾಕಷ್ಟು ಕಾಮೆಂಟ್ ಗಳು ಬಂದಿದ್ದವು. ಇದಕ್ಕೂ ಮೊದಲು ನಟಿ ಮಂದಿರಾ ಬೇಡಿ ಸಹ ಸೀರೆಯಲ್ಲಿಯೇ ಪುಶ್ ಅಪ್ ಮಾಡಿದ್ದರು
https://www.instagram.com/reel/CHz9mPnjI9O/?utm_source=ig_embed