Breaking News

ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ

Spread the love

ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ

7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಕೀರ್ತಿ ರಾಷ್ಟ್ರಾದ್ಯಂತ ಬೆಳಗಿಸಿದ ಮಹಾ ವ್ಯಕ್ತಿ ಬಿ ಶಂಕರಾನಂದ ಅವರ 14ನೇ ಪುಣ್ಯಸ್ಮರಣೆ ಯನ್ನು ಅವರ ಸಹ ಕಣಗಲಾ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧ ಸಂಸ್ಥಾನ ಮಠ ನಿಡಸೋಶಿ ಇವರು ಮಾತನಾಡಿ ಬಿ ಶಂಕರನಂದ ಬೆಳಗಾವಿ ಜಿಲ್ಲೆ ಒಂದು ಹಳ್ಳಿಯಲ್ಲಿ ಹೂಟ್ಟಿ ಬಡ ಕುಟುಂಬದಲ್ಲಿ ಜನಿಸಿ ಇಡೀ ದೇಶ ಹಾಗೂ ಹೊರದೇಶದಲ್ಲಿ ಹೆಸರು ಮಾಡಿದ್ದು ನಮ್ಮ ಹೆಮ್ಮೆ ಯಾಗಿದೆ ಅವರಂತೆ ಎಲ್ಲರೂ ವಿವಿಧ ಕ್ಷೇತ್ರದಲ್ಲಿ ಬೆಳೆದು ನಾಡಿನ ಹೆಸರು ಮುಗಿಲೆತ್ತರಕ್ಕೆ ತೆಗೆದು ಕೊಂಡು ಹೋಗಬೇಕೆಂದು ತಮ್ಮ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ಮಾತನಾಡಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ 1996, 1971, 1977, 1980, 1984, 1989 ಮತ್ತು 1991 ರಲ್ಲಿ ಸತತವಾಗಿ ಏಳು ಬಾರಿ ಲೋಕಸಭೆಗೆ ಆಯ್ಕೆಯಾದರು. ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ನೇತೃತ್ವದ ಸಚಿವಾಲಯಗಳ ಸದಸ್ಯರಾಗಿದ್ದರು. ಮತ್ತು ಪಿ.ವಿ.ನರಸಿಂಹರಾವ್. ಅವರು ಹೊಂದಿದ್ದ ಖಾತೆಗಳಲ್ಲಿ ಸಮಾಜ ಕಲ್ಯಾಣ, ಕಾನೂನು ಮತ್ತು ನ್ಯಾಯ, ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿವೆ. ಜಾತ್ಯಾತೀತ ವ್ಯಕ್ತಿತ್ವದ ಶ್ರೇಷ್ಠ ಸಾಮಾಜಿಕ ಧುರೀಣರು , ರಾಷ್ಟ್ರ ರಾಜಕಾರಣದಲ್ಲಿ ನಿಷ್ಕಳಂಕವಾಗಿ ಮತ್ತು ದೀರ್ಘವಾಗಿ ಪ್ರಕಾಶಮಾನವಾಗಿ ಮಿನುಗಿದ ತಾರೆ , ಕೇಂದ್ರ ಸರಕಾರದ ಹಲವಾರು ಇಲಾಖೆಗಳಲ್ಲಿ ಹಿರಿಯ ಮಂತ್ರಿಪದವನ್ನು ಅಲಂಕರಿಸಿ 1971 ರಿಂದ 1995 ರ ವರೆಗೆ ದೇಶದ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.

ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ ಬಿ ಶಂಕರಾನಂದ ಅವರು 35 ವರ್ಷ ಕೇಂದ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಯಾವುದೇ ಜಾತಿ ಧರ್ಮ ಅನ್ನದೇ ನನ್ನ ಒಳಗೊಂಡಂತೆ ಅನೇಕ ಜನರನ್ನು ಬೆಳೆಸಿದ್ದಾರೆ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು.

ಕೆ ಎಲ್ ಇ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೊರೆ ಅವರು ಮಾತನಾಡಿ ಶಂಕರಾನಂದ 1982 ರಿಂದ ಅವರ ಜೊತೆಗೆ ಕಾಲ ಕಳೆದಿದ್ದೇನೆ ಅವರ ಜೊತೆಗೆ ನಿಂತು ಅವರ ಸಿಗುವ ಗೌರವ ಅವರು ಮಾಡುವ ಕೆಲಸ ನೋಡಿ ಅದಕ್ಕೆ ನಾನು ಒಬ್ಬ ಸಾಕ್ಷಿ. ಅವರ ಮಾಡಿದ ಕೆಲಸ ಬಹಳ ಇವೆ ಬೆಳಗಾವಿ ಐಸಿಎಂ ಹಾಗೂ ವಿವಿಧ ಕಾರ್ಖಾನೆಗಳು ರಾಷ್ಟ್ರಮಟ್ಟದ ಎರಡು ಕಾರ್ಖಾನೆಗಳು ಹೀಗೆ ಬಹಳ ಸಮಾಜ ಮುಖ್ಯವಾಗಿ ಕೆಲಸ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ಮಾಜಿ ಎಂ ಎಲ್ ಸಿ ಮಹಾಂತೇಶ್ ಕವಟಗಿಮಠ,
ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಾಮು ಮೇಟಿ, ಶಿವಕುಮಾರ್ ಪಾಟೀಲ ವಿ ಎಸ್ ನಿಂಗನೂರು ಬಾಬಾಸಾಹೇಬ್ ಪಾಟೀಲ್, ಸಂಜು ಬಾನೆ,ವೀರಕುಮಾರ ಪಾಟೀಲ, ಪ್ರದೀಪ್ ಶಂಕರಾನಂದ ಕಣಗಲಿ ಸದಾಶಿವ ಸಂಕಪ್ಪಗೋಳ ಇನ್ನುಳಿದವರು ಭಾಗಿಯಾಗಿದ್ದರು.


Spread the love

About Laxminews 24x7

Check Also

ನವನಗರದ ಸರಾಯಿ ಅಂಗಡಿ ವಿರುದ್ಧ ಮಹಿಯರಿಂದ ಮುಂದುವರೆದ ಪ್ರೊಟೆಸ್ಟ್

Spread the loveನವನಗರದ ಸರಾಯಿ ಅಂಗಡಿ ವಿರುದ್ಧ ಮಹಿಯರಿಂದ ಮುಂದುವರೆದ ಪ್ರೊಟೆಸ್ಟ್….ಮಹಿಳೆಯರ ಹೋರಾಟಕ್ಕೆ ಸಾಥ್ ನೀಡಿದ ಪುರುಷರ್ …. ಕಳೆದೊಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ