ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ (Kiccha Suddep) ಈ ವಾರ ತಮ್ಮದೇ ಮಾತಿನ ಶೈಲಿಯಲ್ಲಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಾರ ನಡೆದ ಟಾಸ್ಕ್ ಹಾಗೂ ಇತರೆ ವಿಚಾರಗಳ ಕಿಚ್ಚ ಮಾತನಾಡಿದ್ದಾರೆ.
ತಲೆ ತಿರುಗಿ ಬಿದ್ದಿದ್ದ ಚೈತ್ರಾ ಅವರು ಚಿಕಿತ್ಸೆ ಪಡೆದು ದೊಡ್ಮನೆಗೆ ಬಂದಿದ್ದಾರೆ.
ಮನೆಗೆ ಬಂದ ಕೂಡಲೇ ಚೈತ್ರಾ ಅವರು ಹೊರಗಿನ ಕೆಲ ವಿಚಾರಗಳನ್ನು ಮಂಜು ಅವರ ಬಳಿ ಪಿಸು ದನಿಯಲ್ಲಿ ಹೇಳಿದ್ದಾರೆ. ವಿಕ್ಕಿ ಅಣ್ಣ ನಿಮಗೆ ಎಲ್ಲೂ ಬೆಲೆ ಇಲ್ಲ ಬಿಡಿ. ಎಲ್ಲರೂ ನಾಟ್ ಓಕೆ ಎಂದು ಹೊರಗೆ ಕೇಳಿದ ಮಾತನ್ನು ಸ್ಪರ್ಧಿಗಳ ಬಳಿ ಹೇಳಿದ್ದಾರೆ.
ಮಂಜು ಅವರ ತಮಗೆ ಇಷ್ಟ ಆಗುತ್ತಿಲ್ಲವೆಂದು ಶಿಶಿರ್ ಜತೆ ಮಂಜು, ಗೌತಮಿ ಅವರ ಬಗ್ಗೆ ಮೋಕ್ಷಿತಾ ಮಾತನಾಡಿದ್ದಾರೆ. ಮೋಕ್ಷಿತಾ ಅವರಿಗೆ ನಿಮ್ಮ ಆಟ ನೀವು ಆಡಿಯೆಂದು ಇತರರು ಹೇಳಿದ್ದಾರೆ.
ಭವ್ಯ ಅವರು ಎಲಿಮಿನೇಟ್ ಆಗುವ ವಿಚಾರದಲ್ಲಿ ಟಿಆರ್‌ಪಿ ಬಗ್ಗೆ ಮಾತನಾಡಿದ ಅನುಷಾ ಅವರಿಗೆ ಕಿಚ್ಚ ಅವರು ಪಾಠ ಮಾಡಿದ್ದಾರೆ. ಭವ್ಯ ಅವರು ಎಲಿಮಿನೇಟ್ ಆಗುವ ವಿಚಾರ ನಿಮಗೆ ಮೊದಲೇ ಗೊತ್ತಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅದನ್ನು ಭವ್ಯ ಅವರೇ ಹೇಳಿದ್ದು ಎಂದು ಅನುಷಾ ಹೇಳಿದ್ದಾರೆ.

ಇದನ್ನು ಕೇಳಿದ ಕಿಚ್ಚ ಅಅವರು, ಟಿಆರ್‌ಪಿ ನೀವಿಲ್ಲದಿದ್ರು ಇರುತ್ತದೆ. ವರ್ಷವಿಡೀ ಬೇರೆ ಬೇರೆ ಕಾರ್ಯಕ್ರಮದಿಂದ ಟಿವಿ ರೇಟ್ ಬರುತ್ತದೆ. ವೋಟಿಂಗ್ ಲೈನ್ ಓಪನ್ ಇರಲಿಲ್ಲ. ನಿಮಗೆ ಭಾನುವಾರ ಗೊತ್ತಾಗೋದು. ನೀವು ಮನೆಯಲ್ಲಿ ಸ್ಪರ್ಧಿಗಳಾಗಿರಿ, ನಿಮ್ಮನ್ನು ಪ್ರೂವ್ ಮಾಡಿ ಅದು ಬಿಟ್ಟು ಡೈರೆಕ್ಟರ್, ಕ್ರಿಯೇಟಿವ್ ಆಗಬೇಡಿ ಎಂದು ಹೇಳಿದ್ದಾರೆ.
ಈ ವಾರ ಜೋಡಿ ಟಾಸ್ಕ್ ಇಡಲಾಗಿತ್ತು. ಆಟದಲ್ಲಿ ಟ್ವಿಸ್ಟ್ ನೀಡಲು ಬಿಗ್ ಬಾಸ್ ತಮ್ಮ ಪಾರ್ಟ್ನರ್ ಬದಲಾಯಿಸಲು ಆಯ್ಕೆ ನೀಡಲಾಗಿತ್ತು. ಇದರಲ್ಲಿ ಚೈತ್ರಾ ಅವರು ತಮ್ಮ ಜೋಡಿ ಶಿಶಿರ್ ಅವರನ್ನು ಬದಲಾಯಿಸಿ ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಲು ಬಯಸಿದ್ದರು. ಈ ವಿಚಾರ ಶಿಶಿರ್ ಅವರಿಗೆ ಸಿಟ್ಟು ತರಿಸಿತ್ತು.

ಕೆಲವೊಂದು ನೀತಿ ಪಾಠಗಳ ಕಥೆಯ ಉದಾಹರಣೆಯನ್ನು ಕೊಟ್ಟು ಚೈತ್ರಾ ಅವರು ಹೊರಗಡೆಯಲ್ಲಿ ಕೇಳಿಬಂದ ಕೆಲ ಅಭಿಪ್ರಾಯವನ್ನು ಪರೋಕ್ಷವಾಗಿ ಸ್ಪರ್ಧಿಗಳಿಗೆ ಹೇಳಿದ್ದಾರೆ.
ಈ ಸಂಬಂಧ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಚೈತ್ರಾ ನೀತಿ ಕಥೆಯನ್ನು ಹೇಳಿ ಅವರಿಗೆ ಕಿಚ್ಚ ತೋಳದ ಕಥೆಯನ್ನು ಹೇಳಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚೈತ್ರಾಗೆ ಕಿಚ್ಚನಿಂದ ಕ್ಲಾಸ್..: ಆಸ್ಪತ್ರೆಯಲ್ಲಿ ಏನೆಲ್ಲ ಆಯಿತು ಎಂದು ಚೈತ್ರಾನ ಬಳಿ ಕಿಚ್ಚ ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರು, “ಡಾಕ್ಟರ್ ಬಳಿ ನಾನು ಕೆಲವೊಂದು ವಿಚಾರ ಶೋ ಬಗ್ಗೆ ಕೇಳಿದ್ದೆ. ಶೋನಲ್ಲಿ ಏನೆಲ್ಲ ಮಿಸ್ ಆಗುತ್ತಿದೆ ಎಂದು ಕೇಳಿದ್ದೆ. ಅದಕ್ಕೆ ಅವರು ಮನರಂಜನೆ ಇಲ್ಲ ಬರೀ ಫೈಟ್ ಬಗ್ಗೆ ಹೇಳಿದ್ರು. ನಿಮ್ಮ ಮೆಚ್ಚಿನ ಸ್ಪರ್ಧಿ ಯಾರೆಂದು ಕೇಳಿದ್ದೆ. ಅದಕ್ಕೆ ಅಲ್ಲಿದ್ದವರು ಶಿಶಿರ್ ಹಾಗೂ ಹನುಮಂತು ಅವರ ಹೆಸರು ಹೇಳಿದ್ದರು ಎಂದು ಆಸ್ಪತ್ರೆಯಲ್ಲಿ ನಡೆದ ಮಾತಿನ ಬಗ್ಗೆ ವಿವರಿಸಿದ್ದಾರೆ.
ನಾನೇ ಡಾಕ್ಟರ್ ಹತ್ರ ಸ್ವಲ್ಪ ಕೇಳಿದ್ದೆ. ಅಲ್ಲಿದ್ದ ನರ್ಸ್ ಹತ್ರ ಹೀಗೆಯೇ ಕೇಳಿದಾಗ ಪ್ರತಿಯೊಬ್ಬರು ಅಭಿಪ್ರಾಯಗಳಲ್ಲೂ ನಾನು ಯಾವುದು, ನನ್ನ ಅಭಿಪ್ರಾಯವನ್ನು ಮಿಕ್ಸ್ ಮಾಡಿ ಹೇಳಿಲ್ಲವೆಂದಿದ್ದಾರೆ. ಎಲ್ಲರ ಬಗ್ಗೆ ನಾನು ಅಲ್ಲಿ ಮಾತನಾಡಿಲ್ಲವೆಂದಿದ್ದಾರೆ.
Laxmi News 24×7