ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay) ವಿವಾಹ ಸಂಭ್ರಮದ ಶಾಸ್ತ್ರಗಳು ಆರಂಭಗೊಂಡಿದೆ. ವೈದ್ಯೆ ಧನ್ಯತಾ (Dhanyata) ಜತೆ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ (ನ.17ರಂದು) ನೆರವೇರಿದೆ.
ಅರಸಿಕೆರೆ ತಾಲೂಕು ಕಾಳೇನಹಳ್ಳಿಯಲ್ಲಿರುವ ಧನಂಜಯ್ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ.
ಧನ್ಯತಾ ಅವರಿಗೆ ಉಂಗುರ ತೊಡಿಸಿದ್ದಾರೆ. ಈ ವೇಳೆ ಎರಡೂ ಕುಟುಂಬದ ಆಪ್ತರು ಉಪಸ್ಥಿತಿಯಲ್ಲಿದ್ದರು.
ಲಗ್ನ ಪತ್ರಿಕೆ ಬರೆಸುವ ಶಾಸ್ತ್ರ ಹಿರಿಯರು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ. ಇದೇ ವೇಳೆ ಮದುವೆಯ ದಿನಾಂಕವನ್ನು ನಿಗದಿ ಮಾಡಿಲಾಗಿದೆ.
ಅದರಂತೆ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನೆರವೇರಲಿದೆ. ಅದೇ ದಿನ ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ ಎನ್ನಲಾಗಿದೆ.
ಡಾಲಿ ಅವರ ನಿಶ್ಚಿಯಾರ್ಥ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲೂ ಡಾಲಿ ಧನಂಜಯ್ ಅವರು ಮಿಂಚುತ್ತಿದ್ದಾರೆ. ನಟ, ನಿರ್ಮಾಪಕ, ಗೀತ ರಚನಕಾರರಾಗಿ ಡಾಲಿ ಸಿನಿಮಾರಂದಲ್ಲಿ ಗುರುತಿಸಿಕೊಂಡಿದ್ದಾರೆ.