ಬೆಳಗಾವಿ: ರಾಜ್ಯ ಮದ್ಯ ಮಾರಾಟಗಾರರು ನ.20 ರಂದು ಕರೆ ನೀಡಿರುವ ರಾಜ್ಯ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಉಮೇಶ್ ಬಾಳಿ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಪ್ರವಾಸೋದ್ಯಮ ಹೋಟೆಲ್ ಬೇರೆ ಅವರ ಸಂಘಟನೆಯೇ ಬೇರೆ.
ಹೀಗಾಗಿ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದರು.
ಪ್ರವಾಸೋದ್ಯಮ ಹೋಟೆಲ್ ನವರು ಬ್ಯಾಂಕ್ ನಿಂದ ಸಾಲ ಪಡೆದು ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿ ಹೋಟೆಲ್ ನಡೆಸುತ್ತಿದ್ದೇವೆ. ನಿರುದ್ಯೋಗಿಗಳಿಗೆ ಕೆಲಸ ಕೊಟ್ಟು ವರ್ಷಕ್ಕೆ ಲೈಸನ್ಸ್ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದೇವೆ. ಈ ಶುಲ್ಕವನ್ನು ಸರಕಾರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ನಾವು ತುಂಬುವ ಜಿಎಸ್ ಟಿ ತೆರಿಗೆ, ವಿದ್ಯುತ್ ಬಿಲ್, ನೀರಿನ ಕರ ಹಾಗೂ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದರು.
Laxmi News 24×7