Breaking News

ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Spread the love

ದಾವಣಗೆರೆ: ಯತ್ನಾಳ್ ನನ್ನನ್ನು ಥರ್ಡ್ ರೇಟ್ ರಾಜಕಾರಣಿ ಎಂದು ಹೇಳಿದ್ದಾರೆ. ಅವರು ರಾಜಕಾರಣದಲ್ಲಿ ದೊಡ್ಡವರು. ನಾನು ಥರ್ಡ್‌ ಆದರೆ ಅವರು ಫೋರ್ತ್ ಗ್ರೇಡ್ ರಾಜಕಾರಣಿ. ಎಲ್ಲವೂ ಅವರೇ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ಟಿಆರ್ ಪಿಗಾಗಿ ಮಾತನಾಡುತ್ತಿದ್ದಾರೆ.

ನಾನು ಅಟಲ್ ವಾಜಪೇಯಿ ಸಂಪುಟದ ಸಚಿವ ಎಂದು ಹೇಳಿಕೊಳ್ಳುವ ಮೂಲಕ ಅಟಲ್ ವಾಜಪೇಯಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ವಾಜಪೇಯಿ ಇದ್ದಿದ್ದರೆ ಅವರ ಮಾತು ಕೇಳಿ ನೋವು ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

 

ಯಡಿಯೂರಪ್ಪ ಪಾದಯಾತ್ರೆ ನಡೆಸಿದರು. ಸೈಕಲ್ ಹೊಡೆದರು. ಪಕ್ಷ ಕಟ್ಟಿದವರು. ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಯತ್ನಾಳ್ ಅವರ ಕನಸಲ್ಲೂ ಹೋಗುತ್ತಾರೆ. ಅವರ ಬಗ್ಗೆ ಮಾತನಾಡಿದಿದ್ದರೆ ಅವರಿಗೆ ಊಟ ಸೇರಲ್ಲ. ನಿದ್ರೆ ಬರಲ್ಲ. ಅವರು ಬಾಯಿಚಟಕ್ಕೆ ಮಾತನಾಡುತ್ತಿದ್ದಾರೆ ಎಂದು ದೂರಿದರು.

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

 

ಯತ್ನಾಳ್ ಇತರರ ತಂಡಕ್ಕೆ ಮಾನ್ಯತೆ ಇಲ್ಲ. ಅವರದ್ದು ಅಧಿಕೃತ ಅಲ್ಲ. ವಕ್ಫ್ ಹಗರಣದ ವಿರುದ್ಧ ಹೋರಾಟಕ್ಕೆ ರಚಿಸಿರುವ ಮೂರು ತಂಡಗಳೇ ಅಧಿಕೃತ. ಬೇರೆ ಯಾರೇ ಮಾಡಿದರೂ ಅಧಿಕೃತ ಅಲ್ಲ ಎಂದು ತಿಳಿಸಿದರು.

ವಿಜಯೇಂದ್ರ ಅವರು ಮುಖ್ಯಮಂತ್ರಿ ಯಾಕೆ ಆಗಬಾರದು. ಜನಾಶೀರ್ವಾದದಿಂದ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಾಗಿಯೇ ಯತ್ನಾಳ್ ಅವರಿಗೆ ಹೊಟ್ಟೆ ಉರಿ. ಹಾದೀಲಿ ಬೀದೀಲಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ