Breaking News

ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ

Spread the love

ಬೈಲಹೊಂಗಲ: ರೈತ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿರುವ, ಇತಿಹಾಸ ಪ್ರಸಿದ್ಧ ಇಲ್ಲಿನ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 18 ರಂದು ಸಂಜೆ 4.30ಕ್ಕೆ ನವಿಲಿನ ಕಳಶ ಹೊತ್ತ ಮಹಾರಥ ಎಳೆಯಲು ಭಕ್ತರು ಕಾಯುತ್ತಿದ್ದಾರೆ.

 

80 ಅಡಿ ಎತ್ತರದ ರಥಃ ಪ್ರತಿವರ್ಷ ಮರಡಿ ಬಸವೇಶ್ವರ ಜಾತ್ರೆಗೆ ಒಂದು ತಿಂಗಳ ಮುನ್ನವೇ ಸಿದ್ಧತೆ ಆರಂಭಿಸಲಾಗುತ್ತದೆ. ವಿಜಯದಶಮಿ ದಿನದಂದು ದೇವಸ್ಥಾನದಲ್ಲಿರುವ ಬೃಹತ್ ಆಕಾರದ ಕಲ್ಲಿನ ಗಾಲಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಜವಳಿ ಕೂಟಕ್ಕೆ ತರಲಾಗುತ್ತದೆ. ದೀಪಾವಳಿ ಬಲಿಪಾಡ್ಯಮಿ ದಿನದಂದು ಕಟ್ಟಿಗೆಗಳನ್ನು ತಂದು ರಥ ಸಿದ್ಧಪಡಿಸಲಾಗುತ್ತದೆ.

80 ಅಡಿ ಎತ್ತರದ ಭವ್ಯ ರಥದಲ್ಲಿ ಬಸವೇಶ್ವರ, ಮಹಾನ್ ತಪಸ್ವಿಗಳ ಚಿತ್ರ ರಾಷ್ಟ್ರಧ್ವಜ ಅಳವಡಿಸಲಾಗುತ್ತದೆ. ಮರಡಿ ಬಸವೇಶ್ವರ ಗದ್ದುಗೆ ಅಲಂಕರಿಸಲಾಗುತ್ತದೆ. ರಥದ ಮೇಲಿನ ಬೆಳ್ಳಿ ನವಿಲು, ಬಂಗಾರ ಲೇಪನ ಕಳಶ ನೋಡುಗರನ್ನು ಆಕರ್ಷಿಸುತ್ತದೆ. ಹಲವಾರು ತಿರುವುಗಳ ಮಧ್ಯೆಯೂ ಎತ್ತರದ ಪ್ರದೇಶಕ್ಕೆ ರಥೋತ್ಸವ ಸಾಗುವ ದೃಶ್ಯ ಮನಮೋಹಕ. ರಥದಲ್ಲಿ ಶರಣರ ವಚನ ಗ್ರಂಥಗಳು, ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.

ಬೃಹತ್ ಕೃಷಿಮೇಳ, ಜಾನುವಾರ ಜಾತ್ರೆ: ಈ ಬಾರಿಯ ಜಾತ್ರೆಯಲ್ಲಿ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿಕ ಪರಿಕರ ಮಾರಾಟಗಾರರ ಸಂಘದ ವತಿಯಿಂದ ಎಪಿಎಂಸಿ ಆವರಣದಲ್ಲಿ ನ.19ರಿಂದ 21ರವರೆಗೆ ಬೃಹತ್ ಕೃಷಿಮೇಳ, ಜಾನುವಾರ ಜಾತ್ರೆ ನಡೆಯಲಿದೆ.

 ರಥಕ್ಕೆ ಅರ್ಪಿಸುವ ವಿವಿಧ ಬಗೆಯ ಹಾರಗಳು.-ಜಗದೀಶ ಕೋತಂಬ್ರಿ ಕಮಿಟಿ ಅಧ್ಯಕ್ಷಹಿರಿಯರ ಜೊತೆ ನಾವು ಜಾತ್ರೆಯ ಯಶಸ್ವಿಗೆ ಶ್ರಮಿಸುತ್ತಿದ್ದೇವೆ. ನಾಡಿನ ಜನತೆ ಭಕ್ತಿಯಿಂದ ಮರಡಿ ಬಸವೇಶ್ವರ ರಥ ಎಳೆಯಲು ಸಜ್ಜಾಗಿದ್ದಾರೆ


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ