ಮುಂಬಯಿ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಬಿಜೆಪಿಯನ್ನು “ನಾಯಿ’ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ.
ಅಕೋಲಾ ಪಶ್ಚಿಮ ಕ್ಷೇತ್ರದಲ್ಲಿ ಮಾತನಾಡಿ, “ಹಿಂದುಳಿದ ವರ್ಗದವರನ್ನು ಬಿಜೆಪಿಯವರು ನಾಯಿಯೆಂದು ಕರೆಯುತ್ತಾರೆ. ಅವರಿಗೆ ನೀವು ಮತ ನೀಡಬೇಕೇ?
ನಾಯಿಗೆ ಯಾವ ಸ್ಥಳ ತೋರಿಸಲಾಗುತ್ತದೆಯೋ, ಈ ಬಾರಿಯ ಎಲೆಕ್ಷನ್‌ನಲ್ಲಿ ಬಿಜೆಪಿಯನ್ನು ಸೋಲಿಸಿ ಅದೇ ಸ್ಥಿತಿ ತರಬೇಕು ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಕಿರೀಟ್ ಸೋಮಿಯಾ, ಕಾಂಗ್ರೆಸ್ ಸೋಲುತ್ತಿದೆ. ಹಾಗಾಗಿ ಇಂಥ ಹೇಳಿಕೆ ನೀಡುತ್ತಿದೆ ಎಂದ್ದಾರೆ.
Laxmi News 24×7