ಬೆಂಗಳೂರು: ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ ಮತದಾನ ನಡೆಯಲಿದ್ದು, ಚುನಾವಣ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 45 ಅಭ್ಯರ್ಥಿ ಗಳ ಭವಿಷ್ಯವನ್ನು ಮತದಾರ ಬರೆಯ ಲಿದ್ದಾನೆ.
ಶಿಗ್ಗಾಂವಿ, ಸಂಡೂರು, ಚನ್ನ ಪಟ್ಟಣ ಸೇರಿ 3 ವಿಧಾನಸಭಾ ಕ್ಷೇತ್ರ ಗಳಲ್ಲಿ 7 ಲಕ್ಷಕ್ಕೂ ಅಧಿಕ ಮತ ದಾರ ರಿದ್ದು, ಮತದಾನಕ್ಕಾಗಿ 770 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ.
ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳೆಯರೇ ನಿರ್ವಹಿಸುವ 5 ಸಖೀ ಮತಗಟ್ಟೆ ಹಾಗೂ ತಲಾ ಒಂದೊಂದು ಯುವ ಮತಗಟ್ಟೆ, ದಿವ್ಯಾಂಗ ಮತಗಟ್ಟೆ ಹಾಗೂ ವಿಷಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಶಿಗ್ಗಾವಿಯ 121, ಸಂಡೂರಿನ 127 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಇದ್ದರೆ, ಚನ್ನಪಟ್ಟಣದ ಎಲ್ಲ 276 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಇರಲಿದೆ.
ಮೂರು ಕ್ಷೇತ್ರಗಳಲ್ಲಿ 250ಕ್ಕೂ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಮೇಲೆ ನಿಗಾ ಇಟ್ಟು ಮೇಲ್ವಿಚಾರಣೆ ನಡೆಸಲಿದ್ದಾರೆ. ಮತದಾನಕ್ಕೆ ಅನುಕೂಲವಾಗಲು ಉಪ ಚುನಾವಣೆಗೆ ಮತದಾನ ನಡೆಯಲಿರುವ ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಕಾರ ರಜೆ ಘೋಷಿಸಿದೆ.
Laxmi News 24×7