ಬೆಳಗಾವಿ: ಆಟೋ ರಿಕ್ಷಾ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ಕತ್ತು ಸೀಳಿ ಹಲ್ಲೆ ಮಾಡಿದ ಘಟನೆ ನಗರದ ಎಸ್.ಸಿ.ಮೋಟರ್ಸ್ ಬಳಿ ನ.11ರ ಸೋಮವಾರ ತಡರಾತ್ರಿ ನಡೆದಿದೆ.
ತಾಲೂಕಿನ ಉಚಗಾಂವ ಗ್ರಾಮದ ರಿಯಾಜ್ ತಹಶೀಲ್ದಾರ (55) ಎಂಬ ರಿಕ್ಷಾ ಚಾಲಕನ ಮೇಲೆ ಅಜ್ಞಾತರ ಗುಂಪು ದಾಳಿ ನಡೆಸಿದ್ದು, ಕತ್ತು ಸೀಳಿ ಹಲ್ಲೆ ಮಾಡಿದೆ.
ಗಾಯಗೊಂಡ ಆಟೋ ಚಾಲಕ ರಿಯಾಜ್ ಕೂಡಲೇ ಮಾರ್ಕೆಟ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪ್ರಯಾಣಿಕರನ್ನು ಎಸ್.ಸಿ. ಮೋಟರ್ಸ್ ಬಳಿ ಬಿಟ್ಟು ವಾಪಸ್ ಹೋಗುವಾಗ ಅಜ್ಞಾತ ಯುವಕರ ಗುಂಪು ದಾಳಿ ಮಾಡಿದೆ. ಆಟೋ ಚಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಶಾಸಕ ಆಸೀಫ್ ಸೇಠ್, ಕಾನೂನು-ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.