ಚೆನ್ನೈ: ಹಿರಿಯ ತಮಿಳು ನಟ ಡೆಲ್ಲಿ ಗಣೇಶ್ (Delhi Ganesh) ಅವರು ಶನಿವಾರ (ನ.09) ಚೆನ್ನೈನಲ್ಲಿ ಅಸುನೀಗಿದರು. 80 ವರ್ಷದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಡೆಲ್ಲಿ ಗಣೇಶ್ ಅವರ ಸಾವಿನ ಬಗ್ಗೆ ಅವರ ಪುತ್ರ ಮಹದೇವನ್ ಸಾಮಾಜಿಕ ಜಾಲತಾಣದಲ್ಲಿ ಖಚಿತ ಪಡಿಸಿದ್ದಾರೆ.
ಭಾರತೀಯ ವಾಯು ಸೇನೆಯಲ್ಲಿ ದಶಕದ ಕಾಲ ಕೆಲಸ ಮಾಡಿದ್ದ ಡೆಲ್ಲಿ ಗಣೇಶ್ ಅವರು ಬಳಿಕ ಚಿತ್ರರಂಗದಲ್ಲಿ ಮಿಂಚಿದ್ದರು. ಡೆಲ್ಲಿ ಗಣೇಶ್ ಅವರ ಅಂತಿಮ ಕ್ರಿಯೆಯು ಸೋಮವಾರ (ನ.11) ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಗಣೇಶ್ ಅವರಿಗೆ ಡೆಲ್ಲಿ ಗಣೇಶ್ ಎಂದು ಹಿರಿಯ ಚಲನಚಿತ್ರ ನಿರ್ಮಾಪಕ ಕೆ ಬಾಲಚಂದರ್ ಅವರು ಸ್ಟೇಜ್ ನೇಮ್ ನೀಡಿದ್ದರು. ಅವರು 1976 ರಲ್ಲಿ ಪತ್ತಿನ ಪ್ರವೇಶಂ ಮೂಲಕ ತಮ್ಮ ಮೊದಲ ಯಶಸ್ಸು ಕಂಡಿದ್ದರು.
ಡೆಲ್ಲಿ ಗಣೇಶ್ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಾದ್ಯಂತ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡರು. ನಾಯಕನ್, ಮೈಕೆಲ್ ಮದನ ಕಾಮ ರಾಜನ್, ಸಿಂಧು ಭೈರವಿ, ಇರುವರ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.