Breaking News

ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Spread the love

ಲ್ಪೆ: ಪ್ರವಾಸಿಗರ ಆಕರ್ಷಣೆಯಲ್ಲೊಂದಾಗಿ ರಾಜ್ಯದಲ್ಲೇ ಪ್ರಥಮ ಎಂಬಂತೆ ತೇಲುವ ಸೇತುವೆ (ಫ್ಲೋಟಿಂಗ್‌ ಬ್ರಿಡ್ಜ್) 2021ರಲ್ಲಿ ಮಲ್ಪೆ ಬೀಚ್‌ನಲ್ಲಿ ಪ್ರಾರಂಭಗೊಂಡಿದ್ದು, ಈ ಬಾರಿ ನ. 6ರಿಂದ ಪ್ರವಾಸಿಗರಿಗೆ ತೆರೆಯಲಾಗಿದೆ. ಇದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಕುತ್ತಿದೆ.

 

ಸಂಜೆ ಹೊತ್ತಿಗೆ ತಣ್ಣಗಿನ ಗಾಳಿಯನ್ನು ಆಸ್ವಾದಿಸಲು ಸಮುದ್ರ ತೀರದತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರತಿದಿನ 4ರಿಂದ 5 ಸಾವಿರ ಪ್ರವಾಸಿಗರು ಮಲ್ಪೆ ಬೀಚ್‌ಗೆ ಬರುತ್ತಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆ 10 ಸಾವಿರವನ್ನು ದಾಟುತ್ತಿದೆ.

ಸುಮಾರು 130 ಮೀ. ಉದ್ದ, 3 ಮೀ. ಅಗಲವಿರುವ ತೇಲುವ ಸೇತುವೆಯಲ್ಲಿ ಏಕಕಾಲಕ್ಕೆ 200ಕ್ಕೂ ಮಿಕ್ಕಿ ಪ್ರವಾಸಿಗರು ತುದಿಯಲ್ಲಿ ನಿಂತು ಸೂರ್ಯಾಸ್ತವನ್ನು ನೋಡಬಹುದು. ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೈಲಿಂಗ್ಸ್‌ ಅಳವಡಿಸಲಾಗಿದೆ.

ಸಮುದ್ರ ಭಾಗದಲ್ಲಿರುವ ತುದಿಯಲ್ಲಿ ಪ್ಲಾಟ್‌ಫಾರ್ಮ್ 15 ಅಡಿ ಉದ್ದ, 8 ಅಡಿ ಅಗಲವಿದೆ. ಪ್ರವಾಸಿಗರ ರಕ್ಷಣೆಗಾಗಿ 13 ಮಂದಿ ಜೀವ ರಕ್ಷಕರು, ಲೈಪ್‌ ಜಾಕೆಟ್‌, ಲೈಫ್‌ಬಾಯ್‌ ಇರಲಿದ್ದಾರೆ. ಅಲೆಗಳ ಮಧ್ಯೆ ತೇಲುತ್ತಾ, ಪ್ರವಾಸಿಗರಿಗೆ ವಿಶೇಷ ಅನುಭವ ನೀಡುವ ಈ ಬ್ರಿಡ್ಜ್ ನಲ್ಲಿ 15 ನಿಮಿಷಗಳ ಅವಧಿಗೆ ಮೋಜಿಗೆ 150 ರೂ. ಶುಲ್ಕ ನಿಗದಿ ಮಾಡಲಾಗಿದೆ. ತೇಲುವ ಸೇತುವೆಯ ಅನುಭವ ಪಡೆಯಲಿಚ್ಛಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್‌ ಜಾಕೆಟ್‌ ತೊಡಬೇಕಾಗಿದೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ