ಬೆಳಗಾವಿ : ತಾಲೂಕಿನ ಮಾರಿಹಾಳ
ಗ್ರಾಮದ “ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ” ಇವರ ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಒಳಪಡುವ ರೈತರಿಗೆ ಅವರ ಕೃಷಿ ಕಾರ್ಯಕ್ಕೆ ಅನಕೂಲ ಆಗುವ ದೃಷ್ಟಿಯಿಂದ ನಬಾರ್ಡ್ ಯೋಜನೆಯ ಅಡಿಯಲ್ಲಿ ಪ್ರತಿಶತ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಯಿತು.

ಇದೇ ವೇಳೆ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಹೋಗಿ ಕರ ಕುಶಲ ಉದ್ಯೋಗ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲು ದೃಷ್ಟಿಯಿಂದ ದ್ವಿಚಕ್ರ ವಾಹನಗಳನ್ನು (ಸೈಕಲ್ಮೋಟಾರಗಳನ್ನು) ಸಂಘದ ನಿರ್ಧರಿತ ಬಡ್ಡಿ ರೂಪದಲ್ಲಿ ವಿತರಣೆ ಮಾಡಲಾಗಿದೆ.

ಈ ಸಂದರ್ಬದಲ್ಲಿ ಟ್ಟ್ರ್ಯಾಕ್ಟರಗಳನ್ನು ಪಡೆದ ರೈತ ಫಲಾನುಭವಿಗಳಾದ ಶಿವನಗೌಡ ನಿರ್ವಾಣಿ ಹಾಗೂ ಅಲ್ತಾಫ್ ಜಮಾದಾರ, ಇವರನ್ನು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ ಅವರು ಹಸಿರು ಶಾಲ ಹಾಕಿ ಸತ್ಕರಿಸಿ ಶುಭ ಕೋರಿದರು,
ಉಪಾಧ್ಯಕ್ಷರಾದ ಮಹದೇವ ಧನಾಯಿ, ಮುಖ್ಯ ನಿರ್ವಾಹಕರಾದ ರುದ್ರಪ್ಪ ಚನ್ನನ್ನವರ, ನಿರ್ದೇಶಕರಾದ ಜಿ, ಅಕ್ಕತಂಗೇರಹಾಳ, ಎಸ್ ಚಾಟೆ, ಎಸ್ ನಿರ್ವಾಣಿ, ಆರ್ ಹನ್ನೂರ, ವಿ ಚವಾಣ್, ಕೆ ಅಗಸಗಿ, ಎಸ್ ಮುಲ್ಲಾ, ಎಸ್ ಧರ್ಮೋಜಿ, ಜಿ ಪಾಟೀಲ, ಎಸ್ ಪೂಜೇರಿ ಅವರೆಲ್ಲರೂ ಸೇರಿಕೊಂಡು ಟ್ರ್ಯಾಕ್ಟರ್ ಮತ್ತು ಬೈಕಗಳ ಕೀಲಿ ಕೈಗಳನ್ನು ಪಲಾನುಭವಿಗಳಿಗೆ ಹಸ್ತಾಂತರಿಸಿ ಶುಭ ಕೋರಿ ಅಭಿನಂದಿಸಿದ್ದು , ಬ್ಯಾಂಕಿನ ಸಿಬ್ಬಂದಿಗಳು ಈ ಸಂತಸದ ಸಮಯದಲ್ಲಿ ಸಿಹಿ ಹಂಚಿದ್ದಾರೆ..