ಚನ್ನಪಟ್ಟಣದ ಉಪಚುನಾವಣ ರಣಕಣ ಇಡೀ ದೇಶದ ಗಮನ ಸೆಳೆದಿದೆ. ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ಬೊಂಬೆ ನಾಡು ಮಾತ್ರ ಎಲ್ಲಕ್ಕಿಂತಲೂ ಹೈ ವೋಲ್ಟೇಜ್ ಕಣವಾಗಿ ಪರಿಣಮಿಸಿದೆ. ಇಲ್ಲಿ ನೀರಾವರಿ ವಿಚಾರದ ಜತೆಗೆ ಕಣ್ಣೀರಿನ ವಿಚಾರವೂ ಚರ್ಚೆಗೆ ಬರುತ್ತಿದೆ.
ರೈತರ ವಿಚಾರದ ಜತೆ ರೌಡಿಸಂ ವಿಚಾರವೂ ಟೀಕೆಗೆ ಅಸ್ತ್ರವಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಹಲವು ಪ್ರಬಲ ನಾಯಕರ ಭರ್ಜರಿ ಪ್ರಚಾರದ ನಡುವೆ ಮತದಾನದ ಕೊನೆಯ ಕ್ಷಣದಲ್ಲಿ ಈ ಬಾರಿ ಶತಾಯಗತಾಯ ಮೊಮ್ಮಗನನ್ನ ಗೆಲ್ಲಿಸಲೇಬೇಕೆಂದು ಪಣತೊಟ್ಟು ಪ್ರಚಾರಕ್ಕಿಳಿದಿರುವ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ (H D Deve Gowda) ಅವರು ಇಳಿ ವಯಸ್ಸಿನಲ್ಲಿ ಉತ್ಸಾಹಿ ತರುಣನಂತೆ ಗೋಚರಿಸಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ತೆಗೆದುಹಾಕುವವರೆಗೂ ವಿರಮಿಸುವುದಿಲ್ಲ ಮತ್ತು ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ” ಎಂದು ದೊಡ್ಡ ಗೌಡರು ಶುಕ್ರವಾರ(ನ8) ಪುನರುಚ್ಚರಿಸಿದ್ದಾರೆ.