ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಅಂಗ ಪಕ್ಷದವಾದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಪುರುಷ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವುದಾಗಿ ಭರವಸೆ ನೀಡಿದೆ.
ಜತೆಗೆ ದಿನ ಬಳಕೆ ವಸ್ತುಗಳ ಬೆಲೆಯನ್ನು ಸ್ಥಿರೀಕರಣಗೊಳಿಸಲಾಗುವುದು ಹಾಗೂ ಧಾರಾವಿ ಕೊಳಗೇರಿ ಮರು ಅಭಿವೃದ್ಧಿ ಯೋಜನೆಯನ್ನು ಕೈ ಬಿಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ಸರ್ಕಾದಿಂದ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ದೊರೆಯುತ್ತಿದೆ. ಅದೇ ರೀತಿ ಬಾಲಕರಿಗೂ ಉಚಿತ ಶಿಕ್ಷಣ ಒದಗಿಸಲು ಉದ್ದೇಶಿಸಿದ್ದೇವೆ ಎಂದು ಠಾಕ್ರೆ ತಿಳಿಸಿದ್ದಾರೆ.
ಜತೆಗೆ ಬಹುತೇಕ ಎಲ್ಲ ಚುನಾವಣಾ ಭರವಸೆಗಳು ಮಹಾ ವಿಕಾಸ ಅಘಾಡಿ ಪ್ರಣಾಳಿಕೆಯಲ್ಲೇ ಬರಲಿವೆ. ಆದರೆ ಕೆಲವ ವಿಷಯಗಳಲ್ಲಿ ನಾವು ವಿಶೇಷ ಗಮನ ಹರಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
Laxmi News 24×7