ಮಧ್ಯರಾತ್ರಿ ಧಾರವಾಡದಲ್ಲಿ ಸೌಂಡ್ ಮಾಡಿದ ಖಾಸಗಿ ಗನ್……ಮುಂಜಾನೆ ಸ್ಥಳಕ್ಕೆ ಹು-ಧಾ ಕಮಿಷನರ್ ಭೇಟಿ ನೀಡಿ ಪರಿಶೀಲನೆ…
ನಿನ್ನೆ ತಡರಾತ್ರಿ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಎದುರಿಗೆ ನಡೆದ ಫೈರಿಂಗ್ ಸ್ಥಳಕ್ಕೆ ಇಂದು ಮುಂಜಾನೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ವೈ- ಕಳೆದ ದಿನ ತಡರಾತ್ರಿ ಧಾರವಾಡದ ಆರ್.ಎನ್.ಶೆಟ್ಟಿ ರಸ್ತೆ ಎದುರಿಗೆ ಅಭಿಷೇಕ ಬಡ್ಡಿಮನಿ ಎಂಬುವವರು ಸ್ಕೂಟಿ ಮೇಲೆ ಹೊರಟಿದ್ದ ಸಂದರ್ಭದಲ್ಲಿ, ಹಿಂದಿನಿಂದ ಕಾರಿನಲ್ಲಿ ಬಂದ ಮೂರು ಜನ ಅಭಿಷೇಕ ಇದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ.
ಇದರಿಂದ ನಾಲ್ಕೂ ಜನರ ಮಧ್ಯೆ ಪರಸ್ಪರ ಜಗಳ ನಡೆದಿದೆ. ಅಭಿಷೇಕ ಎಂಬಾತನನ್ನು ಮೂರು ಜನ ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ತೀವ್ರ ಹಲ್ಲೆ ನಡೆಸಿದ್ದಾರೆ. ಅವರಿಂದ ಅಭಿಷೇಕ ತಪ್ಪಿಸಿಕೊಂಡು ಬಂದು ತನ್ನ ಬಳಿ ಇದ್ದ ರಿವಾಲ್ವಾರ್‌ನಿಂದ ಕಾರಿನ ಮೇಲೆ ಎರಡು ಸುತ್ತು ಫೈರಿಂಗ್ ನಡೆಸಿದ್ದಾನೆ. ಆನಂತರ ಹೆದರಿ ಸ್ಥಳದಲ್ಲೇ ತನ್ನ ಸ್ಕೂಟಿ ಹಾಗೂ ರಿವಾಲ್ವಾರ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನೂ ಘಟನೆ ಕುರಿತು ಮಾಹಿರಿ ಪಡೆಯಲು ಖಯದ್ದಾಗಿ ಇಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಸ್ಥಳ ವಿಸೀಟ್ ಮಾಡಿ ಪರಿಶೀಲನೆ ಕೈಗೊಂಡು ಠಾಣೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರೆಯೆ ನೀಡಿದ ಕಮುಷನರ್ ಎಬ್ ಶಶಿಕುಮಾರವರು, ಕಾರಿನಲ್ಲಿ ಪ್ರಜ್ವಲ್, ಗಣೇಶ, ದಿನೇಶ ಎಂಬುವವರು ಇದ್ದರು ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕನನ್ನು ಬಂಧಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದ್ದು, ಉಳಿದ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.