ಜಾನಪದ ಸಿಂಗರ್ ಮೇಲೆ ಹಲ್ಲೆ ಆರೋಪ – ಸತತ 5 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸ್
ಚಿಕ್ಕೋಡಿ : ಮೊನ್ನೆ ಅಷ್ಟೇ ಕಾರ್ ಡ್ರೈವ್ ಮಾಡುತ್ತಾ ಶೇಖರ ಹಕ್ಯಾಗೋಳ, ಅಶ್ವಿನಿ ಇರಗಾರ, ರೂಪಾ ಹಕ್ಯಾಗೋಳ ಮೇಲೆ ಪುಂಡತನ ಮೆರೆದಿದ್ದ ಮಾಳು ಉರ್ಪ ಮಾಳಪ್ಪ ನಿಪನಾಳ ಇವನಿಗೆ ರಾಯಬಾಗ ಸರ್ಕಲ್ ಇನ್ಸ್‌ಪೆಕ್ಟರ್ ಅವರು ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸೂಕ್ತ ಕಾನೂನು ಕ್ರಮಕ್ಕೆ ಕೈಗೊಂಡಿದ್ದಾರೆ.
ಆಧುನಿಕ ಜಾನಪದ ಕಲೆಯಲ್ಲಿ ಹೆಸರು ಮಾಡಿರುವ ಮಾಳು ನಿಪನಾಳ ಮೇಲೆ ಇತ್ತೀಚಿನ ದಿನಗಳಲ್ಲಿ ರಾಯಬಾಗ ಹಾಗೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಈಗ ಹಕ್ಯಗೋಳ ಇರಗಾರ ಮೇಲೆ ಹಲ್ಲೆ ಮಾಡಿರುವ ಕಾರಣಕ್ಕೆ ಆರೋಪಿ ಮಾಳು ಉರ್ಪ್ ಮಾಳಪ್ಪ ನಿಪನಾಳ ಅವರನ್ನು ರಾಯಬಾಗ ಪೊಲೀಸ್ ಠಾಣೆಯಲ್ಲಿ ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ಪ್ರಕರಣ ದಾಖಲಾಗಿದೆ.
Laxmi News 24×7