Breaking News

ನಾ ಖಾವುಂಗಾ, ಖಾನೆ ದೂಂಗಾ ಎನ್ನುತ್ತಿದ್ದ ನರೇಂದ್ರ ಮೋದಿ ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ:C.M.

Spread the love

ಳ್ಳಾರಿ: ನಾ ಖಾವುಂಗಾ, ಖಾನೆ ದೂಂಗಾ ಎನ್ನುತ್ತಿದ್ದ ನರೇಂದ್ರ ಮೋದಿ ಜನಾರ್ದನ ರೆಡ್ಡಿಯವರನ್ನು ಯಾಕೆ ಸೇರಿಸಿಕೊಂಡರು. ಲೂಟಿ ಮಾಡಿ ಜೈಲಿಗೆ ಹೋಗಿದ್ದ ರೆಡ್ಡಿ ಅವರನ್ನು ಪಕ್ಷಕ್ಕೆ ಯಾಕೆ ಸೇರಿಸಿಕೊಂಡಿದ್ದೀರಿ. ನರೇಂದ್ರ ಮೋದೀಜಿ ಕ್ಯೂ ಐಸೆ ಬೋಲತಾ ಹೈ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

 

ಸಂಡೂರು ಉಪಚುನಾವಣೆ ನಿಮಿತ್ತ ಬೊಮ್ಮಘಟ್ಟದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇದೇ ಜನಾರ್ಧನರೆಡ್ಡಿ ಬಳ್ಳಾರಿಗೆ ಕಾಲಿಟ್ಟು ನೋಡಿ ಎಂದಿದ್ದರು. ರಿಪಬ್ಲಿಕ್ ಬಳ್ಳಾರಿ ಮಾಡಿದವರು ಯಾರು? ಅಂತವರಿಗೆ ವೋಟು ಕೊಡುತ್ತೀರಾ? ಬಿಜೆಪಿ ಎರಡು ಸಲ ಅಧಿಕಾರಕ್ಕೆ ಬಂದರೂ ಮೆಜಾರಿಟಿ ಬಂದಿತ್ತಾ? ಯಾವತ್ತೂ ಜನ ಆಶೀರ್ವಾದ ಮಾಡಿಲ್ಲ. ಜನಾರ್ದನ ರೆಡ್ಡಿ ಉಪಯೋಗಿಸಿಕೊಂಡು ಆಪರೇಷನ್ ಕಮಲ ಮಾಡಿದರು. 2008, 2019ರಲ್ಲಿ ಕೋಟ್ಯಾಂತರ ಖರ್ಚು ಮಾಡಿ ಅಧಿಕಾರಕ್ಕೆ ಬಂದರು. ಅಧಿಕಾರದಲ್ಲಿದ್ದ ಯಡಿಯೂರಪ್ಪ, ಬೊಮ್ಮಾಯಿ ಏನೂ ಮಾಡಲಿಲ್ಲ. ಇವರಿಗೆ ಮಾನ ಮರ್ಯಾದೆ ಇದೆಯಾ? ಬಡವರ ಬಗ್ಗೆ ಬಿಜೆಪಿಯವರು ಒಂದೂ ಯೋಜನೆ ಮಾಡಲಿಲ್ಲ. ಏನೂ ಮಾಡದ ಅವರಿಗೆ ಮತ ಕೊಡಬೇಕಾ ಎಂದು ಪ್ರಶ್ನಿಸಿದರು.

ನಾವು 2023ರ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಜಾರಿ ಮಾಡುವುದಾಗಿ ಹೇಳಿದ್ದೆವು. ಈಗ ಮಾಡಿದ್ದೇವೆ, ಸುಮ್ಮನೆ ಕೂತ್ರೆ ಹೆಂಗವ್ವಾ ತಾಯಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

3.50 ಕೋಟಿ ಹೆಣ್ಣು ಮಕ್ಕಳು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ತಿರುಗಾಡಬಹುದು. ಬಿಜೆಪಿಯವರು ಮಾಡಿದ್ರಾ? ಅವರಿಗೆ ವೋಟ್ ಹಾಕ್ತೀರಾ? ಕಾಂಗ್ರೆಸ್ ಮಾತ್ರ ವೋಟ್ ಹಾಕಬೇಕು ಎಂದು ನೀವು ಎಲ್ಲರಿಗೂ ಹೇಳಬೇಕು. ಮಹಿಳೆಯರಿಗೆ ಪ್ರತೀ ತಿಂಗಳು ಎರಡು ಸಾವಿರ ಕೊಡುತ್ತಿರುವುದು ಯಾರು? ನೀವು ಎಂದು ಜನ ಹೇಳಿದಾಗ ಮತ್ತೆ ನಮಗೆ ವೋಟ್ ಹಾಕಿ ಎಂದು ಸಿಎಂ ಹೇಳಿದರು.


Spread the love

About Laxminews 24x7

Check Also

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐವರು ಬಾಣಂತಿಯರು ಸಾವು

Spread the loveಬಳ್ಳಾರಿ, ನವೆಂಬರ್ 28: ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ