ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಬೆಳಗಾವಿ ಎಪಿಎಂಸಿ ಪೊಲೀಸರು ಬಂಧಿಸಿ ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ನಡೆದಿದೆ
ವೈಭವ ನಗರದ ವಿವಿಧ ಮನೆಗಳ್ಳತನ ಮಾಡಿದ್ದ ಮಸ್ತಾನ್ ಅಲಿ ಶೇಖ್ ಎಂಬ ಆರೋಪಿಯನ್ನು ಬಂಧಿಸಿರುವ ಎಪಿಎಂಸಿ ಪೊಲೀಸರು ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡು ಚಿನ್ನಾಭರಣ ಕಳೆದುಕೊಂಡು ದೂರು ನೀಡಿದ ಶಿವಪ್ಪ ಛತ್ರಪ್ಪ ಪೂಜಾರಿ ಗ ಹಸ್ತಾಂತರ ಪ್ರಕ್ರಿಯೆ ನಡೆಸಲಿದ್ದಾರೆ.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸಿಪಿ ಸಂತೋಷ ಸತ್ ನಾಯಕ ಮಾರ್ಗದರ್ಶನದಲ್ಲಿ ಎಪಿಎಂಸಿ ಸಿಪಿಐ ಯು.ಎಸ್.ಅವಟಿ ನೇತೃತ್ವದಲ್ಲಿ ಪಿಎಸ್ಐಗಳಾದ ಮಂಜುನಾಥ ಭಜಂತ್ರಿ, ಸಂತೋಷ ದಳವಾಯಿ, ತ್ರಿವೇಣಿ ದಾಳಿ ನಡೆಸಿ ಮನೆಗಳ್ಳನನ್ನು ಬಂಧಿಸಿದ್ದಾರೆ.
ವಿಚಾರಣೆಗೆ ಒಳಪಡಿಸಿದಾಗ ಮನೆಗಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಬೆಳಗಾವಿ ನಗರದ ಎ.ಪಿ.ಎಮ್.ಸಿ ಪೊಲೀಸ್ ಠಾಣಿರವರು ಕಾರ್ಯಾಚರಣೆ ಮಾಡಿ 6,64,403/- ರೂ ಕಿಮ್ಮತ್ತಿನ 83.100 ಗ್ರಾಂ ಬಂಗಾರದ ಆಭರಣಗಳು ಹಾಗೂ 567.180 ‘ಗ್ರಾಂ ಬೆಳ್ಳಿಯ ಆಭರಣಗಳು ವಶಪಡಿಸಿಕೊಂಡಿದ್ದು ಇರುತ್ತದೆ.
ಈ ಪ್ರಕರಣದಲ್ಲಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಮಂಜುನಾಥ ಭಜಂತ್ರಿ, ಪಿಎಸ್ಐ, ಶ್ರೀಮತಿ ತ್ರಿವೇಣಿ ನಾಟೀಕರ, ಸಂತೋಷ ದಳವಾಯಿ ಪಿಎಸ್ಐ, ಬಿ ಕೆ ಮಿಟಗಾರ, ಎ.ಎಸ್.ಐ, ಡಿ. ಸಿ ಸಾಗರ, ಬಿ ಎಮ್ ನರಗುಂದ, ನಾಗಪ್ಪ ಬೀರಗೊಂಡ, ಕೆ ಬಿ ಖಾನಮ್ಮನವರ, ಗೋವಿಂದಪ್ಪ ಪೂಜಾರ, ಎಮ್ ಜಿ ಮರನಿಂಗಗೋಳ. ಎ ಎನ್ ಮೊಕಾಸಿ ಹಾಗೂ ಸಿಬ್ಬಂದಿಯವರು ಪ್ರಶಂಸನೀಯ ಕೆಲಸ ಮಾಡಿದ್ದು ಸದರಿಯವರಿಗೆ ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಉಪಪೋಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.