ಬೆಳಗಾವಿ: ‘ಬೆಳಗಾವಿ-ಬೆಂಗಳೂರು ಮಾರ್ಗವಾಗಿ ಪ್ರತಿದಿನ ಬೆಳಿಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದ ಇಂಡಿಗೋ ಸಂಸ್ಥೆಯ ವಿಮಾನ ಸೇವೆ ಸ್ಥಗಿತಗೊಳಿಸಬಾರದು’ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
‘ಈ ವಿಮಾನಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿ, ತುರ್ತು ಕೆಲಸ ಮುಗಿಸಿಕೊಂಡು ಒಂದೇ ದಿನದಲ್ಲಿ ವಾಪಸಾಗಲು ಅನುಕೂಲವಾಗಿತ್ತು. ಆದರೆ, ಅ.27ರಿಂದ ಈ ಸೇವೆ ಸ್ಥಗಿತಗೊಳಿಸುತ್ತಿರುವ ಮಾಹಿತಿ ಬಂದಿದೆ. ಈ ಸೇವೆ ಸ್ಥಗಿತವಾದರೆ, ಈ ಭಾಗದ ವಾಣಿಜ್ಯ ಚಟುವಟಿಕೆಗೆ ಹೊಡೆತ ಬೀಳಲಿದೆ. ಹಾಗಾಗಿ ಈ ನಿರ್ಧಾರ ಕೈಬಿಟ್ಟು, ಸೇವೆ ಮುಂದುವರಿಸಬೇಕು’ ಎಂದು ಕೋರಿದ್ದಾರೆ.
Laxmi News 24×7