Breaking News

ಆರೋಗ್ಯ ಹದಗೆಡದಂತೆ ವಾರಕ್ಕೆ ಎಷ್ಟುಬಾರಿ ಆಲ್ಕೋಹಾಲ್ ಕುಡಿಯಬಹುದು? ತಜ್ಞರು ಹೇಳುವುದೇನು?

Spread the love

ಧುನಿಕ ಯುಗದಲ್ಲಿ ಮದ್ಯ ಸೇವನೆ (Alcohol) ಎಂಬುದು ಲೈಫ್‌ಸ್ಟೈಲ್‌ನ ಭಾಗವಾಗಿ ಮಾರ್ಪಡುತ್ತಿದೆ. ಔತಣ ಕೂಟ (Dinner), ಆಫೀಸ್ ಪಾರ್ಟಿ, ಕುಟುಂಬ ಸಮಾರಂಭಗಳಲ್ಲಿ (Family Function) ಕೂಡ ಆಲ್ಕೋಹಾಲ್ ಇದ್ದೇ ಇರುತ್ತದೆ. ಮದ್ಯ ಸೇವನೆಯು ಅನಾರೋಗ್ಯಕರ ಪದ್ಧತಿಯಾಗಿದ್ದರೂ ಇದು ಆಧುನಿಕ ಜೀವನ ಶೈಲಿಯ (Lifestyle) ಒಂದು ಭಾಗ ಎಂದೆನಿಸಿದೆ.
ಮದ್ಯ ಸೇವಿಸಿಲ್ಲ ಎಂದಾದರೆ ಅವರು ಇನ್ನು ಹಳೆ ಕಾಲದವರು ಮಾಡರ್ನ್ ಅಲ್ಲ ಎಂಬ ಮಾತುಗಳು ಕೇಳಿಬರುತ್ತವೆ. ಒಟ್ಟಿನಲ್ಲಿ ಆಲ್ಕೋಹಾಲ್ ನಿಮ್ಮ ದೇಹಕ್ಕೆ ಒಳ್ಳೆಯದಲ್ಲ ಆದರೆ ಆಗೊಮ್ಮೆ ಈಗೊಮ್ಮೆ ಮಧ್ಯಮ ಪ್ರಮಾಣದಲ್ಲಿ ಮದ್ಯ ಸೇವನೆ ಸ್ವಲ್ಪ ಮಟ್ಟಿಗೆ ಆರೋಗ್ಯಕರ ಎಂದು ಭಾವಿಸಿದ್ದರೂ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬ ಅಂಶ ಪರಿಶೀಲನೆಯಲ್ಲಿದೆ.

ಮಾಡರೇಟ್ ಡ್ರಿಂಕಿಂಗ್ ಎಂದರೇನು?

ಸರಳವಾದ ಭಾಷೆಯಲ್ಲಿ ಹೇಳುವುದಾದರೆ ಹೆಚ್ಚಿನ ವಯಸ್ಕರಿಗೆ ಕಡಿಮೆ ಅಪಾಯಕಾರಿ ಎಂದು ಸೂಚಿಸಲಾದ ಮದ್ಯಪಾನವನ್ನು ಮಾಡರೇಟ್ ಡ್ರಿಂಕಿಂಗ್ ಎಂದು ಕರೆಯಲಾಗುತ್ತದೆ. ನೀವು ಪಾರ್ಟಿ, ಸಮಾರಂಭಗಳಲ್ಲಿ ಈ ಕಡಿಮೆ ಅಪಾಯಕಾರಿ ಮದ್ಯವನ್ನು ಆನಂದಿಸಬಹುದು. ಈ ಮಾಡರೇಟ್ ಡ್ರಿಂಕಿಂಗ್ ಎಂಬುದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಅರ್ಥವನ್ನು ಹೊಂದಿದೆ.

ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನಲ್ಲಿ, ಪುರುಷರು ಮತ್ತು ಮಹಿಳೆಯರು ವಾರಕ್ಕೆ 10 ಕ್ಕಿಂತ ಹೆಚ್ಚು ಡ್ರಿಂಕ್ಸ್ ಸೇವಿಸಬಾರದು ಎಂದು ಶಿಫಾರಸು ಮಾಡಲಾಗಿದೆ. ಕೆನಡಾದ ನಿಯಮಗಳಿಗೆ ಅನುಸಾರವಾಗಿ ಸ್ತ್ರೀಯಾಗಲಿ ಪುರುಷರಾಗಲಿ ವಾರಕ್ಕೆ ಎರಡು ಡ್ರಿಂಕ್‌ಗಳಿಗಿಂತ ಹೆಚ್ಚು ಆಲ್ಕೋಹಾಲ್ ಸೇವಿಸಬಾರದು ಎಂದು ಸೂಚಿಸಲಾಗಿದೆ.

ಇದನ್ನು : Beer: Beer: ಇನ್ಮುಂದೆ ಬಿಯರ್ ಕುಡಿಬೇಕು ಅಂದ್ರೆ ಬಾರ್‌ಗೇ ಹೋಗಬೇಕಿಲ್ಲ! ಈ ಪೌಡರ್‌ಗೆ ನೀರು ಸೇರಿಸಿದ್ರೆ ಸಾಕು ಕುಡಿಬಹುದು!

ಭಾರತದಲ್ಲಿ ಮಾಡರೇಟ್ ಡ್ರಿಂಕಿಂಗ್​ ಕಟ್ಟುಪಾಡಿಲ್ಲ

ಅಮೇರಿಕನ್ನರಿಗೆ ದಿನಕ್ಕೆ ಒಂದು ಡ್ರಿಂಕ್ ಎಂಬುದನ್ನು ಮಾಡರೇಟ್ ಡ್ರಿಂಕಿಂಗ್ ಸೂಚಿಸುತ್ತದೆ. ಭಾರತದಲ್ಲಿ ಮಾಡರೇಟ್ ಡ್ರಿಂಕಿಂಗ್ ಅನ್ನು ಸೂಚಿಸುವ ಯಾವುದೇ ಸಮಿತಿ ಇಲ್ಲ. ದಿನಕ್ಕೆ ಇಂತಿಷ್ಟೇ ಡ್ರಿಂಕ್ ಸೇವಿಸಬೇಕೆಂಬ ಕಟ್ಟುಪಾಡುಗಳನ್ನು ವಿಧಿಸಿಲ್ಲ. ತಜ್ಞರು ಈ ಬಗ್ಗೆ ಹೇಳುವುದೆಂದರೆ, ಪ್ರತಿ ವಾರಕ್ಕೆ ಸೇವಿಸುವ ಡ್ರಿಂಕ್‌ಗಳ ಬಗ್ಗೆ ಸೂಚಿಸಿದ್ದು, ಮಾಡರೇಟ್ ಆಗಿ ಇದನ್ನು ಹೇಗೆ ಸೇವಿಸಬೇಕೆಂದು ತಿಳಿಸುತ್ತಾರೆ.

ಒಂದು ಲೋಟ ಆಲ್ಕೋಹಾಲ್ ಕೂಡ ನಿಮ್ಮ ದೇಹಕ್ಕೆ ವಿಷವೇ ಎಂದು ಸೂಚಿಸುವವರು ಮಾಡರೇಟ್ ಡ್ರಿಂಕಿಂಗ್ ಕಲ್ಪನೆಯೇ ವ್ಯರ್ಥ ಎಂದು ತಿಳಿಸುತ್ತಾರೆ. ಮಧ್ಯಮ ಸೇವನೆ ಎಂಬುದು ದೇಶದಿಂದ ದೇಶಕ್ಕೆ ಭಿನ್ನವಾಗಿರುವುದಕ್ಕೆ ಆ ಸ್ಥಳದಲ್ಲಿರುವ ಮದ್ಯದ ಪ್ರಕಾರಗಳು ನಮ್ಮ ಸೇವನೆಯ ಅಭ್ಯಾಸಗಳಿಗೆ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ತಿಳಿಸುತ್ತಾರೆ.

ಭಾರತೀಯರು ಜೀರ್ಣಕಾರಿ ಸಮಸ್ಯೆಗಳಿಗೆ ಹೆಚ್ಚು ಒಳಗಾಗುವುದರಿಂದ ಮದ್ಯ ಸೇವಿಸುವಾಗ ಇದನ್ನು ಪರಿಗಣಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಭಾರತೀಯರು ಮಾಡರೇಟ್ ಡ್ರಿಂಕಿಂಗ್ ಕಲ್ಪನೆಯನ್ನು ಅಳವಡಿಸಿಕೊಳ್ಳಬಹುದೇ?

ಭಾರತೀಯರು ಮದ್ಯಪ್ರಿಯರು ಎಂಬ ಹೇಳಿಕೆಯಂತೆ ಭಾರತೀಯರು ವೈನ್, ವೋಡ್ಕಾಕ್ಕಿಂತ ವಿಸ್ಕಿ, ಜಿನ್ ಮತ್ತು ರಮ್‌ನಂತಹ ಮದ ಏರಿಸುವ ಪೇಯಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ.

ದಿಲ್ಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಸಲಹೆಗಾರ ಡಾ ವಿಕಾಸ್ ಜಿಂದಾಲ್, ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾನುಸಾರ ಆಲ್ಕೊಹಾಲ್ ಸೇವನೆಗೆ ಗರಿಷ್ಠ ಮಿತಿಯು ಮಹಿಳೆಯರಿಗೆ ದಿನಕ್ಕೆ ಒಂದು ಡ್ರಿಂಕ್, ಪುರುಷರಿಗೆ ದಿನಕ್ಕೆರಡು ಡ್ರಿಂಕ್ ಅಗಿದೆ ಎಂದು ಹೇಳುತ್ತಾರೆ. ಆದರೆ ಭಾರತೀಯರ ವಿಷಯದಲ್ಲಿ ಈ ಮಿತಿಗಿಂತ ಕಡಿಮೆ ಮದ್ಯಪಾನ ಸೇವಿಸುವುದು, ಇಲ್ಲವೇ ಅಪರೂಪಕ್ಕೊಮ್ಮೆ ಮದ್ಯಪಾನ ಮಾಡುವುದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ವಿಕಾಸ್ ಸೂಚಿಸುತ್ತಾರೆ.

ನಾವು ಅಧಿಕ ಮಸಾಲೆ ಪದಾರ್ಥ, ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಆಗಾಗ್ಗೆ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುತ್ತೇವೆ ಈ ಸಮಯದಲ್ಲಿ ನಾವು ಸೇವಿಸುವ ಆಲ್ಕೋಹಾಲ್ ಅನ್ನು ಕೂಡ ಅದನ್ನು ಆಧರಿಸಿ ಸೇವಿಸಬೇಕು ಎಂದು ತಿಳಿಸುತ್ತಾರೆ.

ಆಲ್ಕೋಹಾಲ್ ಜೀರ್ಣಾಂಗದಲ್ಲಿ ಉರಿಯೂತವನ್ನು ಉಂಟುಮಾಡುವ ಮೂಲಕ, ಆಮ್ಲ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಕರುಳಿನ ಬ್ಯಾಕ್ಟೀರಿಯಾದ ಮೇಲೆ ಪರಿಣಾಮ ಬೀರುವ ಮೂಲಕ ಈ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು ಎಂದು ವಿಕಾಸ್ ಎಚ್ಚರಿಸುತ್ತಾರೆ.

ಎಷ್ಟು ಡ್ರಿಂಕ್ಸ್ ತುಂಬಾ ಹೆಚ್ಚು?

ಆಲ್ಕೋಹಾಲ್ ಸೇವನೆಯ ಶಿಫಾರಸು ಮಿತಿಗಳಲ್ಲಿ ತಜ್ಞರು ಭಿನ್ನವಾಗಿದ್ದರೂ ಸಹ. ವಿವಿಧ ಪರಿಸ್ಥಿತಿಗಳಲ್ಲಿ ಅವು ಒಂದೇ ಆಗಿರುತ್ತವೆ ಎಂದು ಡಾ ಜಿಂದಾಲ್ ಹೇಳುತ್ತಾರೆ. ಪುರುಷರಿಗೆ, ದಿನಕ್ಕೆ ಎರಡು ಸ್ಟ್ರಾಂಡರ್ಡ್​ ಡ್ರಿಂಕ್ಸ್​ ಮೀರದಂತೆ ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ ಮತ್ತು ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಸ್ಟ್ರಾಂಡರ್ಡ್​ ಡ್ರಿಂಕ್ಸ್ ಸೇವಿಸಬಾರದು ಎಂದು ಸಲಹೆ ನೀಡಿದ್ದಾರೆ.

ಸ್ಟ್ರಾಂಡರ್ಡ್​ ಡ್ರಿಂಕ್ಸ್ ಸಾಮಾನ್ಯವಾಗಿ ಸುಮಾರು 14 ಗ್ರಾಂ ಶುದ್ಧ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ, ಇದು ಸುಮಾರು 350 ಮಿಲಿ ಬಿಯರ್, 150 ಮಿಲಿ ವೈನ್ ಅಥವಾ 45 ಮಿಲಿ ಡಿಸ್ಟಿಲ್ಡ್ ಸ್ಪಿರಿಟ್‌ಗಳಿಗೆ ಸಮನಾಗಿರುತ್ತದೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ