ಶಿವಮೊಗ್ಗ: ಹುಬ್ಬಳಿಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಅ.20ರಂದು ಬಾಗಲಕೋಟೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಅಲ್ಲಿ ಬ್ರಿಗೇಡ್‌ಗೆ ನಾಮಕರಣ, ಮುಂದಿನ ಕಾರ್ಯಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.
ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗ ದಲಿತ ವರ್ಗದ ಜತೆಗೆ ಎಲ್ಲಾ ಸಮುದಾಯದ ದೊಡ್ಡ ಸಂಘಟನೆ ಮಾಡಬೇಕು ಎಂದು ಅನೇಕ ಸಾಧು ಸಂತರ ಅಪೇಕ್ಷೆ ಇದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಒಂದು ಸಭೆ ಆಗಿದೆ. ಸಭೆಯಲ್ಲಿ ತೀರ್ಮಾನ ಆಗಿರುವ ಪ್ರಕಾರ ಬಾಗಲಕೋಟೆಯ ಚರಂತಿಮಠ ಸಭಾಂಗಣದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಎರಡೂವರೆ ಸಾವಿರಕ್ಕೂ ಅ ಧಿಕ ಜನ ಸೇರುವ ನಿರೀಕ್ಷೆ ಇದೆ.
ಉತ್ತರ ಕರ್ನಾಟಕ ಭಾಗದ ಸಾಧು- ಸಂತರು ಸಭೆಯ ನಾಯಕತ್ವ ವಹಿಸುತ್ತಾರೆ. ಅವರೇ ಬ್ರಿಗೇಡ್ ಹೆಸರು ಘೋಷಣೆ ಮಾಡುತ್ತಾರೆ ಎಂದರು.