ನವದೆಹಲಿ:ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ( MS Dhoni New Look ) ಮೈದಾನದಲ್ಲಿ ಮಾತ್ರವಲ್ಲದೆ ಹೊರಗಡೆಯೂ ಸ್ಟೈಲ್ ಟ್ರೆಂಡ್‌ಸೆಟರ್ ಆಗಿದ್ದಾರೆ. ಇತ್ತೀಚೆಗೆ, ಧೋನಿ ಅವರು ತಮ್ಮ ಪ್ರಸಿದ್ಧ ಕೇಶ ವಿನ್ಯಾಸಕ ಅಲೀಮ್ ಹಕೀಮ್ ಅವರೊಂದಿಗೆ ಸ್ಟೈಲಿಶ್ ಕ್ವಿಫ್ ಕೇಶವಿನ್ಯಾಸವನ್ನು ಮಾಡಿದರು.
ಹೊಸ ಲುಕ್ ನಲ್ಲಿ ಧೋನಿ 25 ವರ್ಷದ ಹುಡುಗನಂತೆ ಕಾಣುತ್ತಿದ್ದು ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಹೇರ್ ಸ್ಟೈಲಿಸ್ಟ್ ಹಕೀಮ್ ನಾಲ್ಕು ತಿಂಗಳ ಹಿಂದೆ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ಗಾಗಿ ಧೋನಿ ಅವರ ಕೂದಲನ್ನು ಸ್ಟೈಲ್ ಮಾಡಿದ್ದರು.
ಹೊಸ ಹೊಸ ಪ್ರಯೋಗಗಳಲ್ಲಿ ಧೋನಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಕಳೆದ ಐಪಿಎಲ್ ಸೀಸನ್ ನಲ್ಲಿ ತಮ್ಮ ಉದ್ದನೆಯ ಕೂದಲಿನಿಂದ ಗಮನ ಸೆಳೆದಿದ್ದರು. ಇತ್ತೀಚೆಗಷ್ಟೇ ಅವರು ಹೊಸ ಲುಕ್‌ನೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ.
ಐದು ಬಾರಿ ಐಪಿಎಲ್ ವಿಜೇತರಾಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದ ಕೂಲ್ ಕ್ಯಾಪ್ಟನ್ ತಮ್ಮ ಸ್ಟೈಲಿಶ್ ಲುಕ್‌ನಿಂದ ಅಭಿಮಾನಿಗಳನ್ನು ಮತ್ತೊಮ್ಮೆ ಅಚ್ಚರಿಗೊಳಿಸಿದರು.
Laxmi News 24×7