Breaking News

ರಕ್ಷಣೆ ಕೊಟ್ರೆ ಆ ‘ಮಾಜಿ ಸಿಎಂಗಳ’ ಹನಿಟ್ರ್ಯಾಪ್‌ ಸಾಕ್ಷಿ ಕೊಡ್ತೀನಿ: ಸಂತ್ರಸ್ತೆ ಸವಾಲ್‌

Spread the love

ರಕ್ಷಣೆ ಕೊಟ್ರೆ ಆ ‘ಮಾಜಿ ಸಿಎಂಗಳ’ ಹನಿಟ್ರ್ಯಾಪ್‌ ಸಾಕ್ಷಿ ಕೊಡ್ತೀನಿ: ಸಂತ್ರಸ್ತೆ ಸವಾಲ್‌

ಲ್ಲಿವರೆಗೆ ಉದ್ಯಮಿಗಳು, ಅಧಿಕಾರಿಗಳು ಹಾಗೂ ಕೆಲ ರಾಜಕೀಯ ನಾಯಕರ ಹನಿಟ್ರ್ಯಾಪ್‌ ಬಗ್ಗೆ ಸದ್ದು ಕೇಳಿಬರುತ್ತಿದೆ. ಆದರೆ, ಈ ಹಿಂದೆ ಕರ್ನಾಟಕದ ಸಿಎಂ ಸ್ಥಾನದಲ್ಲಿದ್ದವರೂ ಈ ಹನಿಟ್ರ್ಯಾಪ್‌ ಬಲೆಯಲ್ಲಿ ಸಿಲುಕಿದ್ದರು ಎನ್ನುವ ವಿಚಾರ ಸದ್ಯ ರಾಜ್ಯ ರಾಜಕಾರಣವನ್ನು ತಲ್ಲಣಗೊಳಿಸಿದೆ.

 

ಬಿಜೆಪಿ ಶಾಸಕ ಮುನಿರತ್ನ ಅವರಿಂದ ಅತ್ಯಾಚಾರಕ್ಕೆ ಒಳಗಾದರು ಎನ್ನಲಾದ ಸಂತ್ರಸ್ತ ಮಹಿಳೆಯು ಇಂದು ಸುದ್ದಿಗೋಷ್ಠಿ ನಡೆಸಿ, ರಾಜ್ಯವೇ ಬೆಚ್ಚಿಬೀಳುವ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಮೊದಲಿಗೆ ಶಾಸಕ ಮುನಿರತ್ನ ಅವರು ಅತ್ಯಾಚಾರ ಎಸಗಿದ ಬಗ್ಗೆ ಆರೋಪ ಮಾಡಿದ್ದ ಮಹಿಳೆ, ಇಂದು ಮುನಿರತ್ನ ಅವರ ಹನಿಟ್ರ್ಯಾಪ್‌ ಜಾಲದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕೂಡ ಸಿಲುಕಿದ್ದರು ಎನ್ನುವ ಶಾಕಿಂಗ್‌ ವಿಚಾರವನ್ನು ಹೇಳಿದ್ದಾರೆ.

ಮುನಿರತ್ನ ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್‌ ಮಾಡಿದ್ದರು. ಅವರನ್ನು ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಬ್ಲಾಕ್‌ಮೇಲ್‌ ಕೂಡ ಮಾಡಿದ್ದರು. ಈ ಕಾರಣದಿಂದಲೇ ಶಾಸಕರಾಗಿದ್ದ ಅವರಿಗೆ ಸಚಿವ ಸ್ಥಾನ ಒಲಿದು ಬಂತು ಎಂದು ಮಹಿಳೆ ಆರೋಪಿದ್ದಾರೆ.

ಹನಿಟ್ರ್ಯಾಪ್‌ಗೆ ಕೇವಲ ನನ್ನ ಮಾತ್ರ ಅಲ್ಲ. ಇನ್ನೂ ಐದಾರು ಮಂದಿ ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ. ಮುನಿರತ್ನ ಅವರ ಹನಿಟ್ರ್ಯಾಪ್‌ ಜಾಲದಲ್ಲಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು, ಮಾಜಿ ಸಚಿವರು, ಶಾಸಕರು ಹಲವರು ಸಿಲುಕಿದ್ದಾರೆ. ಈ ಕೃತ್ಯಕ್ಕಾಗಿ ನನ್ನನ್ನೂ ಸೇರಿದಂತೆ ಹಲವು ಮಹಿಳೆಯರನ್ನು ದಾಳವಾಗಿ ಬಳಸಿಕೊಂಡಿದ್ದಾರೆ.

ನನ್ನಂತೆ ಹಲವು ಸಂತ್ರಸ್ತೆಯರಿದ್ದಾರೆ. ಇವರಲ್ಲಿ ಕೆಲವರಿಗೆ ಎಚ್‌ಐವಿ ಕೂಡ ಇದೆ. ಇಂತಹ ಮಹಿಳೆಯರನ್ನು ಬಳಸಿಕೊಂಡೇ ಮುನಿರತ್ನ ಬಿಬಿಎಂಪಿ ಮಾಜಿ ಸದಸ್ಯೆಯೊಬ್ಬರ ಪತಿಯ ಹನಿಟ್ರ್ಯಾಪ್‌ ಮಾಡಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ