ಭಾರತದಲ್ಲಿ ನವರಾತ್ರಿ ಹಬ್ಬಕ್ಕೆ (Navaratri Festival) ವಿಶೇಷ ಆದ್ಯತೆ ನೀಡಲಾಗುತ್ತದೆ 9 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ಬೀದಿ ಬೀದಿಗಳಲ್ಲಿ ದುರ್ಗಾದೇವಿಯನ್ನು (Durga ) ಕೂರಿಸಿ ಆರಾಧನೆ ಮಾಡಲಾಗುತ್ತದೆ. ಅದೇ ರೀತಿ ಕೆಲವರು ಮನೆಯಲ್ಲಿಯೂ ಕೂಡ ದುರ್ಗಾಮಾತೆಯನ್ನು ಕೂರಿಸಿ, ಅಥವಾ ಗೊಂಬೆಗಳನ್ನು ಕೂರಿಸಿ ಒಂಭತ್ತು ದಿನಗಳ ಕಾಲ ವೃತ ಮಾಡಿ ಪೂಜೆ (Puja) ಮಾಡಿ ಭಕ್ತಭಾವದಿಂದ ನವದುರ್ಗೆಯರಿಗೆ ಪ್ರಾರ್ಥನೆ ಮಾಡುತ್ತಾರೆ.

ಆದರೆ ಮುಸ್ಲಿಮರೇ (Muslims) ಬಹುಸಂಖ್ಯಾತರಾಗಿರುವ ಹಿಂದುಗಳು ಕೇವಲ ಬೆರಳೆಣಿಕೆಯಷ್ಟಿರುವ ಪಾಕಿಸ್ತಾನದಲ್ಲೂ (Pakistan) ನವರಾತ್ರಿ ಸಂಭ್ರಮ ನಡೆಯುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ನಂಬಲೇಬೇಕು.. ಪಾಕಿಸ್ತಾನದ ಕರಾಚಿಯಲ್ಲಿ (Karachi) ಈ ದಸರಾ ಹಬ್ಬವನ್ನು ಆಚರಿಸಲಾಗಿದೆ.ಪಾಕಿಸ್ತಾನದ ದಸರಾ ಸಂಭ್ರಮದ ವಿಡಿಯೋ ವೈರಲ್ ಕರಾಚಿಯ ಬೀದಿಯೊಂದರಲ್ಲಿ ನಡೆದ ದುರ್ಗಾದೇವಿಯ ಆರಾಧನೆಯ ವೀಡಿಯೋವೊಂದನ್ನು ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಧೀರಜ್ ಮಂದನ್ ಎನ್ನುವವರು ವಿಡಿಯೋ ಹಂಚಿಕೊಂಡಿದ್ದಾರೆ.