Breaking News

ಬಿಜೆಪಿ ಅವಧಿಯಲ್ಲಿ ‘KSRTC ಬಸ್’ಗಳ ಆಯುಧ ಪೂಜೆಗೆ ರೂ.30 ಕೊಡ್ತಿತ್ತು, ನಾವು 250ಕ್ಕೆ ಹೆಚ್ಚಿಸಿದ್ದೇವೆ-ರಾಮಲಿಂಗಾರೆಡ್ಡಿ

Spread the love

ಬೆಂಗಳೂರು: 2009ರ ಬಿಜೆಪಿಯ ಅವಧಿಯಿಂದಲೂ ಕೆ ಎಸ್ ಆರ್ ಟಿ ಸಿಯ ಬಸ್ಸುಗಳಿಗೆ ಆಯುಧ ಪೂಜೆ ಮಾಡೋದಕ್ಕೆ ರೂ.30 ನೀಡಲಾಗುತ್ತಿತ್ತು. ಅದನ್ನು ರೂ.50, ಆನಂತ್ರ 100, ಈಗ ರೂ.250ಕ್ಕೆ ಹೆಚ್ಚಿಸಿದ್ದು ಕಾಂಗ್ರೆಸ್ ಸರ್ಕಾರ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

 

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ಅವರಿಗೆ ಸಾರಿಗೆ ಸಂಸ್ಥೆಗಳ‌ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪವಾದರೂ ಮಾಹಿತಿ‌ ಸಂಗ್ರಹಿಸಿ ಟ್ಟೀಟ್ ಮಾಡಲು ಯಾರಾದರೂ ಪ್ರಜ್ಞಾವಂತರು ಸಲಹೆ ನೀಡಿದರೆ ಒಳ್ಳೆಯದು ಅನ್ನಿಸುತ್ತೆ. ಇಲ್ಲವೆಂದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಳ್ಳುವ ಹಠಕ್ಕೆ ಬಿದ್ದ ಆಗಿದೆ ಅವರ ಪರಿಸ್ಥಿತಿ ಎಂದಿದ್ದಾರೆ.

ಪ್ರತಿ‌ ಬಾರಿಯೂ ಅವರಿಗೆ ತಿಳುವಳಿಕೆ ನೀಡಿ ತಮ್ಮ ಬಿ.ಜೆ.ಪಿ‌ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿ‌ ತಳ್ಳಿದ ಪ್ರತಿಯೊಂದು ಅಂಶವನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾಗ್ಯೂ ಸ್ವಲ್ಪ ಕೂಡ ಅರಿವಿಲ್ಲದೆ ಟ್ಟೀಟ್ ಮಾಡಿ ತಮ್ಮ ಮಾರ್ಯಾದೆಯನ್ನು ಈ ರೀತಿ ಹರಾಜು ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.

ಬಿ.ಜೆ.ಪಿ‌ ಅವಧಿಯಿಂದ ಅಂದರೆ 2009 ರಿಂದ ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ನೀಡಲಾಗುತ್ತಿದ್ದ ರೂ.30 ಅನ್ನು ಕಾಂಗ್ರೆಸ್ ಸರ್ಕಾರ 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ ಮಾಡಿತು. ಮರುವರ್ಷದಲ್ಲಿಯೇ ನಮ್ಮ‌ ಸರ್ಕಾರ 2017 ರಲ್ಲಿ ರೂ. 50 ಅನ್ನು ರೂ.100 ಕ್ಕೆ ಏರಿಕೆ ‌ಮಾಡಿತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ‌ ಬಸ್ಸಿಗೆ ನೀಡುವ ಮೊತ್ತದಲ್ಲಿ ರೂ.100 ಯಾವುದೇ ಎಳ್ಳಷ್ಟೂ ಬದಲಾವಣೆ ಮಾಡದೇ ಇದ್ದದ್ದು ಬಿ.ಜೆ.ಪಿ ಸರ್ಕಾರದ ಕೀರ್ತಿಪತಾಕೆ ಮತ್ತಷ್ಟು ಹಾರುವಂತೆ ಮಾಡಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.


Spread the love

About Laxminews 24x7

Check Also

ಹಬ್ಬದ ಅವಧಿಯಲ್ಲಿ ಗುರಿ ಮೀರಿದ ಸಾಧನೆ; 1,100 ಮೆಟ್ರಿಕ್ ಟನ್ ನಂದಿನಿ ಸಿಹಿ ಉತ್ಪನ್ನ ಮಾರಾಟ: ಸಚಿವ ಕೆ.ವೆಂಕಟೇಶ್

Spread the love ಬೆಂಗಳೂರು: ಈ ಬಾರಿ ಹಬ್ಬದ ಅವಧಿಯಲ್ಲಿ ಗುರಿ ಮೀರಿ ನಂದಿನಿ ಸಿಹಿ ತಿಂಡಿ ಉತ್ಪನ್ನಗಳ ಮಾರಾಟವಾಗಿದೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ