ಕೊಪ್ಪಳ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬೆಂಗಾಲು ಪಡೆಗೆ ಎದುರು ಹೋಗಿ ಟ್ರಾಫಿಕ್ ನಿಯಮಗಳನ್ನು (Traffic Rules) ಉಲ್ಲಂಘಿಸಿದ ಆರೋಪ ಮೇರೆಗೆ ಪೊಲೀಸರು ಶಾಸಕ ಜನಾರ್ದನ ರೆಡ್ಡಿ (Janardhan Reddy) ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಎಂ ಕಾನ್ ವೇ (Chief Minister Convoy) ನಿಯಮ ಉಲ್ಲಂಘಿಸಿದ ಸಂಬಂಧ ಪ್ರಕರಣ ದಾಖಲಾಗಿದ್ದು, ಕೇಸ್ನ ಅನ್ವಯ ಗಂಗಾವತಿ (Gangavati ) ಸಂಚಾರಿ ಪೊಲೀಸರಿಂದ ಮೂರು ವಾಹನಗಳ ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 5ರಂದು ಸಿಎಂ ಗಂಗಾವತಿ ಮಾರ್ಗವಾಗಿ ಹೋಗುವಾಗ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಕಾನ್ ವೇ ಏದುರು ಹೋಗಿದ್ದರು. ಈ ಸಂಬಂದ ಜನಾರ್ದನ ರೆಡ್ಡಿ ಕಾರು ಹಾಗು ಇನ್ನೆರೆಡು ಕಾರುಗಳ ಮೇಲೆ ಪೊಲೀಸರು ಸ್ವಯಂ ಪ್ರೇರಣೆ ಪ್ರಕರಣ ದಾಖಲಿಸಿದ್ದರು.
ಕೊಪ್ಪಳದಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದ ಎಸ್ಪಿ ಡಾ ರಾಮ ಅರಸಿದ್ದಿ ಅವರು, ಕಾರು ಚಲಾಯಿಸುತ್ತಿದ್ದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇದೇ ಕಾರಿನಲ್ಲಿ ಜನಾರ್ದನರಡ್ಡಿ ಇದ್ದರು, ಆ ಕಾರು ಹಾಗೂ ಇನ್ನೆರೆಡು ಕಾರುಗಳ ಮೇಲೆ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಎಂ ಕಾನ್ ವೇಗಾಗಿ ಸ್ವಲ್ಪ ಸಮಯ ಝಿರೋ ಟ್ರಾಫಿಕ್ ಮಾಡಲಾಗಿತ್ತು. ಆದರೆ ಕೆಲವೊಮ್ಮೆ ಸಮಯ ಹೆಚ್ಚು ಕಡಿಮೆಯಾಗುತ್ತದೆ. ಆದರೆ ಡಿವೈಡರ್ ದಾಟಿ ವೇಗದಲ್ಲಿ ಕಾರನ್ನು ಓಡಿಸಲಾಗಿದೆ, ಈ ಪ್ರಕರಣದ ವಿಚಾರಣೆಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದರು.