ನವಲಗುಂದ: ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷರಾಗಿ ಶಾರದಾ ಶಿಕ್ಷಣ ಸಂಸ್ಥೆಯ ಪುಷ್ಪಾ ಹಿರೇಮಠ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾಗರಾಜ ಧಾರವಾಡಶೆಟ್ರ ಅಧ್ಯಕ್ಷತೆಯಲ್ಲಿ ಸೋಮವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ವೆಂಕರಡ್ಡಿ ನಡುವಿನಮನಿ (ಗೌರವಾಧ್ಯಕ್ಷ), ಶೋಭಾ ದಾಡಿಬಾವಿ (ಉಪಾಧ್ಯಕ್ಷೆ), ವಿ.ಬಿ.ನವಲಗುಂದ (ಪ್ರಧಾನಕಾರ್ಯದರ್ಶಿ), ಗುರುರಾಜ ಧಾರವಾಡ (ಕಾರ್ಯಾಧ್ಯಕ್ಷ), ಭರತೇಶ ಕುರುಬರ (ಖಜಾಂಚಿ), ರವಿ ಬಾಜಿ (ಕಾರ್ಯದರ್ಶಿ), ಉಮೇಶ ಬಲ್ಲದನವರ (ಸಂಘಟನಾ ಕಾರ್ದರ್ಶಿ) ಹಾಗೂ ನಿರ್ದೇಶಕರಾಗಿ ಪ್ರೊ.ಎಸ್.ಕೆ.ದೋಟಿಕಲ್, ರಂಗರಡ್ಡಿ ಅಂಗಡಿ ಹಾಗೂ ಕುರಟ್ಟಿ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಆರ್.ಎಫ್.ಭರಮಗೌಡ್ರು, ರಾಘವೇಂದ್ರ ಕಡೆಮನಿ, ಹುತ್ತನಗೌಡ ತೆಂಬದಮನಿ, ಅಕ್ಕಮಹಾದೇವಿ ಕುಂಬಾರ, ಮಹೇಶ ಹಿರೇಮಠ ಇದ್ದರು.