ರಾಯಬಾಗ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗದಿಂದ ಸ್ಪರ್ಧಿಸಿದ್ದ ಪಟ್ಟಣದ ಪ್ರತೀಕ ಅರ್ಜುನ ಗೊಂಡೆ ಹಾಗೂ ಸಹೋದರಿ ಶ್ರುತಿ ಅರ್ಜುನ ಗೊಂಡೆ ಟೆಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
82 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರತೀಕ, ಬೆಂಗಳೂರು ನಗರದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕ ಪಡೆದರೆ, ಶ್ರುತಿ 62ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಂಗಳೂರು ಗ್ರಾಮೀಣ ಭಾಗದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಪ್ರತೀಕಗೆ ಪಟ್ಟಣದ ಎ.ಕೆ.ಟೆಕ್ವಾಂಡೋ ಅಸೋಷಿಯೇಶನ್‌ನ ಅನಿಲ ಕೊರವಿ ತರಬೇತಿ ನೀಡಿದ್ದರೆ, ಶ್ರುತಿಗೆ ಅಶ್ವ ಟೆಕ್ವಾಂಡೋ ಅಸೋಷಿಯೇಶನ್‌ನ ವಿನಾಯಕ ಮಾನೆ ತರಬೇತಿ ನೀಡಿದ್ದರು.
ತಾಲ್ಲೂಕಿನಲ್ಲಿ ಈ ಅಣ್ಣ ತಂಗಿಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
Laxmi News 24×7