Breaking News

ಮತ್ತೆ ಏರುಗತಿಯಲ್ಲಿ ಟೊಮೆಟೋ

Spread the love

ರಾಜ್ಯದಲ್ಲಿ ಕೆಲವು ದಿನಗಳಿಂದ ಟೊಮೆಟೋ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಖ್ಯಾತಿಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿ. ಟೊಮೆಟೋ 30ರಿಂದ 75 ರೂ. ವರೆಗೆ ಹಾಗೂ 15 ಕೆ.ಜಿ.ಯ ಬಾಕ್ಸ್‌ ಕನಿಷ್ಠ 500ರಿಂದ ಗರಿಷ್ಠ 1,100 ರೂ.ಗೆ ಮಾರಾಟವಾಗುತ್ತಿದೆ.

Tomato Price!;ಮತ್ತೆ ಏರುಗತಿಯಲ್ಲಿ ಟೊಮೆಟೋ ಧಾರಣೆ

ದೇಶದ ವಿವಿಧ ಮಹಾನಗರಗಳು, ನೆರೆ ರಾಷ್ಟ್ರಗಳಿಗೂ ಟೊಮೆಟೋ ಕಳುಹಿಸುತ್ತಿದ್ದ ಮಾರುಕಟ್ಟೆಯಿಂದ ಇದೀಗ ಜಿಲ್ಲೆಯ ಅಥವಾ ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲವಾಗಿದೆ.

ಫಸಲು ಕಡಿಮೆಗೆ ಕಾರಣ?
ಟೊಮೆಟೋವನ್ನು ಕಾಡುತ್ತಿರುವ ರೋಗ ಹಾಗೂ ಮಳೆ ಕೊರತೆ, ಸತತವಾಗಿ ಟೊಮೆಟೋ ಬೆಳೆದು ಸತ್ವ ಹೀನವಾಗಿರುವ ಭೂಮಿ, ಗಿಡ ಬೆಳೆದರೂ ಫಸಲು ಬಾರದಂತ ಪರಿಸ್ಥಿತಿ, ಫಸಲು ಬಂದರೂ ಗಾತ್ರದಲ್ಲಿ ಕಳಪೆ ಇತ್ಯಾದಿ ಸಮಸ್ಯೆಗಳು ಬೆಳೆಯನ್ನು ಕಾಡುತ್ತಲೇ ಇದೆ. ಕೆಸಿ ವ್ಯಾಲಿ ನೀರಿನಿಂದಲೂ ಟೊಮೆಟೋ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂಬ ಆರೋಪಗಳು ಇವೆ. ಇದರಿಂದ ಈ ಮೊದಲು ಪ್ರತೀ ಎಕರೆಗೆ 30ರಿಂದ 36 ಟನ್‌ ಟೊಮೆಟೋ ಫಸಲು ಸಿಗುತ್ತಿದ್ದರೆ ಈಗ ಶೇ. 30ರಷ್ಟು ಫಸಲು ಸಿಗುತ್ತಿಲ್ಲ. ಸರಾಸರಿಯಾಗಿ ಕೇವಲ 2ರಿಂದ 5 ಟನ್‌ ಟೊಮೆಟೋ ಮಾತ್ರವೇ ಸಿಗುವಂತಾಗಿದೆ


Spread the love

About Laxminews 24x7

Check Also

ಸಂಸ್ಕೃತ ಶಾಲಾ ಶಿಕ್ಷಕನಿಂದ 9 ವರ್ಷದ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ ಆರೋಪ: ವಿಡಿಯೋ ವೈರಲ್, ಶಿಕ್ಷಕ ಪರಾರಿ, ಪೊಲೀಸರಿಂದ ತಲಾಶ್​

Spread the loveಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಸಂಸ್ಕೃತ ವೇದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಪ್ರಕರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ