Breaking News

ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

Spread the love

ಹುಬ್ಬಳ್ಳಿ: ಕ್ರಿಕೆಟಿಗ ಕೆ.ಎಲ್.ರಾಹುಲ್ (KL Rahul) ಅವರು ಇಲ್ಲಿನ ಪ್ರತಿಭಾವಂತ ಬಡ ವಿದ್ಯಾರ್ಥಿಯೊಬ್ಬರ ಎರಡನೇ ವರ್ಷದ ಶೈಕ್ಷಣಿಕ ಶುಲ್ಕ ಪಾವತಿಸುವ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.

ಇಲ್ಲಿನ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿಕಾಂ ಕಲಿಯುತ್ತಿರುವ ಅಮೃತ್ ಮಾವಿನಕಟ್ಟಿ ಎನ್ನುವ ವಿದ್ಯಾರ್ಥಿಯ ಎರಡನೇ ವರ್ಷದ ಶುಲ್ಕವನ್ನು ಕೆ.ಎಲ್.ರಾಹುಲ್ ಅವರು ಪಾವತಿ ಮಾಡಿದ್ದಾರೆ.

3 ಮತ್ತು 4 ನೇ ಸೆಮಿಸ್ಟರ್ ನ 75,504 ರೂ. ಪಾವತಿಸಿದ್ದಾರೆ. ಇದರ ಮೂಲಕ ಕಳೆದ ವರ್ಷ ಬಿಕಾಂ ಮೊದಲ ವರ್ಷದ ಶುಲ್ಕ ಪಾವತಿ ಮಾಡುವ ಸಂದರ್ಭದಲ್ಲಿ ಎರಡನೇ ವರ್ಷದ ಶುಲ್ಕ ಭರಿಸುವ ಭರವಸೆ ನೀಡಿದ್ದರು. ಬಡ ಪ್ರತಿಭಾನ್ವಿತ ವಿದ್ಯಾರ್ಥಿ ಅಮೃತ್ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದವರು.

ವಿದ್ಯಾರ್ಥಿ ಅಮೃತ ಮೊದಲನೇ ವರ್ಷದ ಬಿಕಾಂ ಪರೀಕ್ಷೆಯಲ್ಲಿ 9.3 ರಷ್ಟು CGPA ಪಡೆದಿದ್ದು, ಈ ವರ್ಷ ಇನ್ನಷ್ಟು ಹೆಚ್ಚಿನ ಅಂಕ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ. “ರಾಹುಲ್ ಸರ್ ಅವರು ಒಳ್ಳೆಯ ಉದ್ದೇಶ ಇಟ್ಟುಕೊಂಡು ನೆರವು ನೀಡಿದ್ದಾರೆ. ಅವರ ನಂಬಿಕೆ ಉಳಿಕೊಳ್ಳುತ್ತೇನೆ. ಮುಂದೆ ಇದಕ್ಕಿಂತ ಹೆಚ್ಚಿನ ಅಂಕ ಪಡೆಯುತ್ತೇನೆ” ಎಂದು ಅಮೃತ್ ಸಂತಸ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

Spread the loveಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ