ಬಳ್ಳಾರಿ: ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ (Darshan) ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಸೋಮವಾರ (ಅ.07) ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ವಿಜಯಲಕ್ಷ್ಮಿ ಜತೆಗೆ ಆಪ್ತರಾದ ಅನುಷಾ ಶೆಟ್ಟಿ ಸೇರಿ ಮೂವರು ಮಹಿಳೆಯರು ಆಗಮಿಸಿದ್ದಾರೆ.
ವಿಜಯಲಕ್ಷ್ಮಿ ಮಧ್ಯಾಹ್ನ 12.12ಕ್ಕೆ ಜೈಲಿಗೆ ಆಗಮಿಸಿದ್ದಾರೆ.
ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿರುವುದು ಇದು ಎಂಟನೇ ಬಾರಿ.
ವಿಜಯಲಕ್ಷ್ಮಿ ಅವರೊಂದಿಗೆ ಸುಶಾಂತ ನಾಯ್ಡು ಸೇರಿದಂತೆ ಒಟ್ಟು ಐವರು ಆಗಮಿಸಿದ್ದಾರೆ. ಬ್ಯಾಗ್ ನಲ್ಲಿ ಬೇಕರಿ ತಿನಿಸು, ಡ್ರೈಫ್ರೂಟ್, ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ತಂದಿದ್ದಾರೆ.